ನವದೆಹಲಿ: ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ 6 ತಿಂಗಳ ಕಡ್ಡಾಯ ಕಾಯುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
142 ನೇ ವಿಧಿಯ ಅಡಿಯಲ್ಲಿನ ಅಧಿಕಾರವನ್ನು ಬಳಸಿಕೊಂಡು ‘ಮದುವೆಯಲ್ಲಿ ಸರಿಪಡಿಸಲಾಗದ ವಿಘಟನೆ’ ಆಧಾರದ ಮೇಲೆ ತಕ್ಷಣವೇ ವಿವಾಹವನ್ನು ವಿಸರ್ಜಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ದಂಪತಿಗಳು ಪರಸ್ಪರ ಒಪ್ಪಿಗೆ ನೀಡಿದರೆ, ಅವರು ವಿಚ್ಛೇದನ ಪಡೆಯಬಹುದು. 6 ತಿಂಗಳು ಕಾಯುವ ಅಗತ್ಯವಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಎಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆಕೆ ಮಹೇಶ್ವರಿ ಅವರನ್ನು ಒಳಗೊಂಡ ಸಂವಿಧಾನ ಪೀಠ ಹೇಳಿದೆ. ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ 6 ತಿಂಗಳ ಕಡ್ಡಾಯ ಕಾಯುವ ಅವಧಿಯನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿದೆ. ಮದುವೆಯಾದ ದಂಪತಿಗಳು ಪರಸ್ಪರ ಒಟ್ಟಿಗೆ ಇರಲು ಇಷ್ಟವಿಲ್ಲದಿದ್ದರೆ ಇನ್ಮುಂದೆ ವಿಚ್ಛೇದನ ಪಡೆಯಲು 6 ತಿಂಗಳು ಕಾಯುವ ಅಗತ್ಯವಿಲ್ಲ.
ಈ ಹಿಂದಿನ ಕಾನೂನು ಪ್ರಕಾರ, ವಿಚ್ಛೇದನ ಪಡೆಯುವ ದಂಪತಿಗಳು, ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದ್ದಂತೆ 6 ತಿಂಗಳು ಒಂದೇ ಮನೆಯಲ್ಲಿ ಜೊತೆಗೆಯಾಗಿ ಜೀವನ ನಡೆಸಬೇಕಿತ್ತು. ಇದು ಕಾನೂನಿನ ನಿಮಯದ ಜತೆಗೆ ಇಬ್ಬರ ನಡುವೆ ಹೊಂದಾಣಿಕೆಯಾಗಿ ನಂತರ ಜೊತೆಯಾಗಿ ಜೀವನ ನಡೆಸುತ್ತಾರೆ ಎನ್ನುವ ಕಾರಣದಿಂದ ಈ ರೀತಿಯ ಕಾನೂನುಗಳನ್ನು ಮಾಡಲಾಗಿತ್ತು. ಆದ್ರೆ, ಇದೀಗ ಒತ್ತಡದ ಆಧಾರದಲ್ಲಿ ಜೀವನ ನಡೆಸುವ ಅಗತ್ಯ ಇಲ್ಲ ಎಂದು ಆದೇಶವನ್ನು ಸುಪ್ರೀಂ ನೀಡಿದೆ.