Share this news

ಬೆಂಗಳೂರು: ಪತಿಯಿಂದ ವಿವಾಹ ವಿಚ್ಛೇದನ ನೋಟಿಸ್ ಬಂದ ಬಳಿಕ ಪತ್ನಿ, ಪತಿ ಹಾಗೂ ಅವರ ಸಂಬAಧಿಗಳ ವಿರುದ್ಧ ದೂರು ನೀಡಿದರೆ ಅದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ನ್ಯಾಯಾಲಯದ ವಿಚಾರಣೆ ವೇಳೆ ಪತಿ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿದರೆ ಆ ದೂರು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟ ಕೋರ್ಟ್ ಪತಿ ವಿರುದ್ಧ ಪತ್ನಿ ನೀಡಿದ್ದ ದೂರನ್ನು ರದ್ದುಪಡಿಸಿದೆ.


ಏನಿದು ಪ್ರಕರಣ:
ರಾಯಚೂರಿನ ದೇವದುರ್ಗದ ಸುಮಾ ಮತ್ತು ಖಾಸಗಿ ಕಂಪನಿಯ ನೌಕರ ಗೋಪಾಲ್ ಗುಂಡ್ಯಾಲ್ ನಡುವೆ 2013ರ ಮೇ ತಿಂಗಳಲ್ಲಿ ವಿವಾಹ ನಡೆದಿತ್ತು. ಆನಂತರ, ತನಗೆ ಹಿಂದಿ ಅಥವಾ ಮರಾಠಿ ಬಾರದ ಹಿನ್ನೆಲೆಯಲ್ಲಿ ಪತಿ ತನ್ನನ್ನು ಪುಣೆಗೆ ಕರೆದುಕೊಂಡು ಹೋಗದೆ ತನ್ನ ಸಂಬAಧಿಗಳ ಮನೆಯಲ್ಲೇ ಬಿಟ್ಟು ಹೋಗಿದ್ದರು ಎಂದು ಸುಮಾ ಆರೋಪಿಸಿದ್ದಾರೆ. ಅಲ್ಲದೇ, ಪತಿಯ ಸಂಬAಧಿಗಳು ಪುಣೆಯಲ್ಲಿರುವ ಪತಿಯ ಮನೆಗೆ ಹೋಗು ಎಂದು ಬಲವಂತಪಡಿಸುತ್ತಿದ್ದರು, ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿದ್ದರುಹೀಗೆ ಪತಿ ಪತ್ನಿ ನಡುವೆ ಮನಸ್ತಾಪ ಹೆಚ್ಚಾಯಿತು. ಈ ಹಿನ್ನಲೆಯಲ್ಲಿ ಪತಿ 2018ರ ಡಿಸೆಂಬರ್ 17ರಂದು ವಿವಾಹ ವಿಚ್ಛೇದನಕ್ಕೆ ಸೊಲ್ಲಾಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಹಾಕಿ ಪತ್ನಿಗೆ ನೋಟಿಸ್ ಕಳುಹಿಸಿದ್ದರು. ಆನಂತರ ಪತ್ನಿ, ಪತಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಪತಿ ಹಾಗೂ ಅವರ ಸಂಬAಧಿಗಳೆಲ್ಲರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದರು. ಅದನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ದೌರ್ಜನ್ಯ ಪ್ರಕರಣಕ್ಕೆ ಸಂಬAಧಪಟ್ಟAತೆ ನ್ಯಾಯಾಲಯವು, ಪತಿ ಹಾಗೂ ಆತನ ಸಂಬAಧಿಗಳ ವಿರುದ್ಧ ಸಾಮಾನ್ಯ ಆರೋಪಗಳನ್ನು ಹೊರಿಸಿ ದೂರು ನೀಡಿದ್ದಾರೆ. ಆದರೆ ವೈಯಕ್ತಿಕವಾಗಿ ಪ್ರತಿಯೊಬ್ಬರು ಇಂತಹುದೇ ಆರೋಪ ಮಾಡಿದ್ದಾರೆಂದು ನಿರ್ದಿಷ್ಟವಾಗಿ ಏನೂ ಹೇಳಿಲ್ಲ. ಹಾಗಾಗಿ ಅರ್ಜಿದಾರರು ಆರೋಪವನ್ನು ಎಸಗಿದ್ದಾರೆಂಬ ತೀರ್ಮಾನಕ್ಕೆ ಬರಲಾಗದು ಎಂದು ನ್ಯಾಯಪೀಠ ಹೇಳಿದೆ.ಅಲ್ಲದೇ, ಈ ಪ್ರಕರಣದಲ್ಲಿ ಪತಿ 2018ರ ಡಿಸೆಂಬರ್ 17ರಂದು ಸೊಲ್ಲಾಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸೇಡಿನಿಂದ ಪತ್ನಿ, ಪತಿ ಹಾಗೂ ಆತನ ಸಂಬAಧಿಗಳೆಲ್ಲರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ, ಆದ್ದರಿಂದ ಈ ಕ್ರಿಮಿನಲ್ ಪ್ರಕರಣಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಕೋರ್ಟ್ ಪ್ರತಿಪಾದಿಸಿದೆ.

Leave a Reply

Your email address will not be published. Required fields are marked *