ಮುಂಬೈ: ವಿಚ್ಛೇದನದ ನಂತರವೂ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮಹಿಳೆ ಜೀವನಾಂಶ ಪಡೆಯಲು ಅರ್ಹಳು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಜನವರಿ 24 ರ ಆದೇಶದಲ್ಲಿ ನ್ಯಾಯಮೂರ್ತಿ ಆರ್‌ಜಿ ಅವಚತ್ ಅವರ ಏಕ ಪೀಠವು ಸೆಷನ್ಸ್ ನ್ಯಾಯಾಲಯವು ಮೇ 2021 ರ ಆದೇಶವನ್ನು ಎತ್ತಿಹಿಡಿದಿದೆ. ವಿಚ್ಛೇದನ ನೀಡಿರುವ ಪೊಲೀಸ್ ಪೇದೆಯು ತನ್ನ ವಿಚ್ಛೇದಿತ ಹೆಂಡತಿಗೆ ತಿಂಗಳಿಗೆ 6,000 ಜೀವನಾಂಶವನ್ನು ಪಾವತಿಸುವಂತೆ ನಿರ್ದೇಶಿಸಿದೆ.
ವಿಚ್ಛೇದಿತ ಪತ್ನಿಗೆ ಡಿವಿ ಕಾಯಿದೆಯಡಿ ಜೀವನಾಂಶ ಪಡೆಯಲು ಅರ್ಹತೆ ಇದೆಯೇ ಎಂಬ ಪ್ರಶ್ನೆಯನ್ನು ಅರ್ಜಿದಾರ(ಮಹಿಳೆ)ರು ಕೇಳಿದ್ದರು. ಈ ದಂಪತಿಗಳು ಮೇ 2013 ರಲ್ಲಿ ವಿವಾಹವಾದರು. ಆದರೆ, ವೈವಾಹಿಕ ವಿವಾದಗಳಿಂದಾಗಿ ಜುಲೈ 2013 ರಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ನಂತರ ದಂಪತಿಗಳು ವಿಚ್ಛೇದನ ಪಡೆದರು. ವಿಚ್ಛೇದನ ಪ್ರಕ್ರಿಯೆಯ ಸಂದರ್ಭದಲ್ಲಿ ಮಹಿಳೆ ಡಿವಿ ಕಾಯ್ದೆಯಡಿ ಜೀವನಾಂಶವನ್ನು ಕೋರಿದ್ದರು.
ಕೌಟುಂಬಿಕ ನ್ಯಾಯಾಲಯವು ಆಕೆಯ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವಳು ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಿ 2021 ರಲ್ಲಿ ತನ್ನ ಮನವಿಯನ್ನು ಸಲ್ಲಿಸಿದಳು. ಯಾವುದೇ ವೈವಾಹಿಕ ಸಂಬAಧ ಅಸ್ತಿತ್ವದಲ್ಲಿಲ್ಲದ ಕಾರಣ, ಡಿವಿ ಕಾಯ್ದೆಯಡಿ ತನ್ನ ಪತ್ನಿ ಯಾವುದೇ ಪರಿಹಾರಕ್ಕೆ ಅರ್ಹಳಾಗಿಲ್ಲ ಎಂದು ಹೈಕೋರ್ಟ್ನಲ್ಲಿ ತನ್ನ ಅರ್ಜಿಯಲ್ಲಿ ವ್ಯಕ್ತಿ ಪ್ರತಿಪಾದಿಸಿದ್ದಾನೆ.