ವಿಜಯಪುರ : ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ಗ್ರಾಮಸ್ಥರು ಇವಿಎಂ ಮಷಿನ್ ಪುಡಿಗಟ್ಟಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಗ್ರಾಮಸ್ಥರು ಚುನಾವಣೆಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ, ಇವಿಎಂ ಯಂತ್ರಗಳು ಹಾಗೂ ವಿವಿ ಪ್ಯಾಡ್ ಗಳನ್ನೂ ಪುಡಿ ಮಾಡಿದ್ದಾರೆ.
ಮಸಬಿನಾಳ ಗ್ರಾಮದಿಂದ ಡೋಣೂರು ಗ್ರಾಮದಿಂದ ಇವಿಎಂ ಕೊಂಡೊಯುತ್ತಿದ್ದರು. ಮತದಾನ ಪ್ರಕ್ರಿಯೆ ಅರ್ಥಕ್ಕೆ ಸ್ಥಗಿತಗೊಳಿಸಿದ್ದಾರೆಂದು ತಪ್ಪಾಗಿ ಗ್ರಹಿಸಿ ಚುನಾವಣಾಧಿಕಾರಿಗಳ ಕಾರು ಪಲ್ಟಿ ಮಾಡಿ ಹಲ್ಲೆ ಮಾಡಿದ್ದಾರೆ. ಬಳಿಕ ಗ್ರಾಮಸ್ಥರ ಗುಂಪು ಇವಿಎಂ ಮಷಿನ್ ಪುಡಿಗಟ್ಟಿದೆ. ಈ ಘಟನೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಹಾಗೂ ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ