ಉಡುಪಿ: ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ಶಂಭುಕಲ್ಲು ಎಂಬಲ್ಲಿನ ಮನೆಯೊಂದು ಕಳೆದ 30 ವರ್ಷಗಳಿಂದ ವಿದ್ಯುತ್ ಸಣಪರ್ಕವನ್ನೇ ಕಾಣದೇ ಅಕ್ಷರಶಃ ಕತ್ತಲಿನ ಕೂಪವಾಗಿತ್ತು. ಹಳೆಯ ಮನೆಯಲ್ಲಿ ಒಬ್ಬರೇ ವಾಸವಿದ್ದ 75ರ ಹರೆಯದ ವಯೋವೃದ್ಧ ದೊಂಬ ಯಾನೆ ದಾಮೋದರ ಭಂಡಾರಿಯವರು ತನ್ನ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ನಡೆಸಿದ ಪ್ರಯತ್ನ ಅಷ್ಟಿಷ್ಟಲ್ಲ, ಪಂಚಾಯಿತಿ,ಮೆಸ್ಕಾA ಇಲಾಖೆ ಹೀಗೆ ಸಾಕಷ್ಟು ಅಲೆದಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಜನಪ್ರತಿನಿಧಿಗಳ ನಿರ್ಲಕ್ಷö್ಯವೋ ಅಥವಾ ಅಧಿಕಾರಿಗಳ ಕಾರ್ಯದಕ್ಷತೆಯ ಕೊರತೆಯೋ ಏನೋ ದೊಂಬ ಭಂಡಾರಿಯವರ ಮನೆ ಮಾತ್ರ ವಿದ್ಯುತ್ ಸಂಪರ್ಕದಿAದ ವಂಚಿತವಾಗಿತ್ತು. ಆದರೆ ಇದೀಗ ಬರೋಬ್ಬರಿ 30 ವರ್ಷಗಳ ಬಳಿಕ ಬೆಳನ್ನೇ ಕಾಣದ ಹಳೆಯ ಮನೆಯು ಇಂಧನ ಸಚಿವರ ಸುನಿಲ್ ಕುಮಾರ್ ಅವರ ಪ್ರಯತ್ನದ ಫಲವಾಗಿ ಬೆಳಕು ಕಾಣುವಂತಾಗಿದೆ.
ಸಚಿವ ಸುನಿಲ್ ಕುಮಾರ್ ಸೂಚನೆಯ ಮೇರೆಗೆ ಮೆಸ್ಕಾಂ ಅಧಿಕಾರಿಗಳು ಉದ್ಯಾವರದ ದೊಂಬ ಯಾನೆ ದಾಮೋದರ ಭಂಡಾರಿಯವರ ಮನೆಗೆ ಬೆಳಕು ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಇದೀಗ 75ರ ಹರೆಯದ ಒಂಟಿ ಹಿರಿಜೀವ ದೊಂಬ ಭಂಡಾರಿಯವರ ಮುಖದಲ್ಲಿ ಧನ್ಯತಾಭಾವ ಮೂಡಿದೆ. ಇಂಧನ ಸಚಿವ ಸುನಿಲ್ ಕುಮಾರ್ ಸೂಚನೆ ಮೇರೆಗೆ ಮೆಸ್ಕಾಂ ಅಧಿಕಾರಿಗಳು ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ದೊಂಬ ಭಂಡಾರಿಯರ ಬಾಳಿನ ಇಳಿಸಂಜೆಯಲ್ಲಿ ಬೆಳಕಿನ ಭಾಗ್ಯ ಕರುಣಿಸಿ ವಯೋವೃದ್ಧರ ಕನಸನ್ನು ನನಸು ಮಾಡಿದ್ದಾರೆ.
ಕತ್ತಲಿನಲ್ಲಿ ವಾಸವಿದ್ದ ಮನೆಗೆ ಬೆಳಕು ನೀಡಿ ನ್ಯಾಯ ಒದಗಿಸಿದರು : ದೊಂಬ ಭಂಡಾರಿ
ನಾನು 30 ವರ್ಷಗಳಿಂದ ಈ ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಜೀವನ ನಡೆಸುತ್ತಿದ್ದೆ, ವಿದ್ಯುತ್ ಸಂಪರ್ಕಕ್ಕಾಗಿ ಸಾಕಷ್ಟು ಪ್ರಯತ್ನಪಟ್ಟರೂ ಪ್ರಯೋಜನವಾಗಿರಲಿಲ್ಲ, ಕೊನೆಗೆ ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ಮನವಿ ಮಾಡಿದ ಮೇರೆಗೆ ಸಚಿವರು ತಕ್ಷಣವೇ ನನ್ನ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಬೆಳಕನ್ನೇ ಕಾಣದ ನನ್ನ ಮನೆಗೆ ಬೆಳಕಿನ ಭಾಗ್ಯ ನೀಡಿ ನ್ಯಾಯ ಒದಗಿಸಿದ್ದಾರೆ ಎಂದು ಸುನಿಲ್ ಕುಮಾರ್ ಅವರ ಕಾರ್ಯವೈಖರಿಯನ್ನು ದೊಂಬ ಭಂಡಾರಿ ಶ್ಲಾಘಿಸಿದ್ದಾರೆ. ಸಚಿವ ಸುನಿಲ್ ಕುಮಾರ್ ಬದ್ಧತೆ ಹಾಗೂ ಕಾರ್ಯದಕ್ಷತೆಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ