ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಪೂರ್ಣ ಬಹುಮತದೊಂದಿಗೆ ಮತ್ತೆ ಅಡಳಿತಕ್ಕೆ ಬಂದಿದ್ದು,ಮುAದಿನ ವಿಧಾಸಭಾಧ್ಯಕ್ಷರು ಯಾರು ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಹಂಗಾಮಿ ಸ್ಪೀಕರ್ ಆಗಿರುವ ಹಿರಿಯ ಸಾಸಕ ಆರ್.ವಿ ದೇಶಪಾಂಡೆಯವರು ಸ್ಪೀಕರ್ ಆಗಲು ಹಿಂದೆಟು ಹಾಕಿದ ಹಿನ್ನಲೆಯಲ್ಲಿ ಪಕ್ಷದ ವರಿಷ್ಠರು ಯು.ಟಿ ಖಾದರ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಹೆಸರು ಅಂತಿಮಗೊಳಿಸಿದ್ದಾರೆ.
ನಾಳೆ (ಬುಧವಾರ) ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಆಡಳಿತ ಪಕ್ಷದ ಯು.ಟಿ ಖಾದರ್ ಅವರೇ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ಪೀಕರ್ ಹುದ್ದೆಗೆ ಯಾರು ಎಂಬ ಕುರಿತು ಸಾಕಷ್ಟು ಚರ್ಚೆಯಾಗಿತ್ತು,ಹಿರಿಯ ಶಾಸಕರು ತಮಗೆ ಸಚಿವ ಸ್ಥಾನ ಬೇಕೆಂದು ಪಟ್ಟು ಹಿಡಿದಿರುವ ಕಾರಣ ಪರ್ಯಾಯ ಹುಡುಕಾಟಕ್ಕೆ ಪಕ್ಷ ಮುಂದಾಗಿತ್ತು. ವಿವಿಧ ಹೆಸರುಗಳ ಚಲಾವಣೆಗೆ ಬಂದರೂ ಅಂತಿಮವಾಗಿ ಯು.ಟಿ. ಖಾದರ್ ಬಗ್ಗೆ ಒಲವು ವ್ಯಕ್ತವಾಗಿದೆ. ಪ್ರಸ್ತುತ ಹಂಗಾಮಿ ಸ್ಪೀಕರ್ ಆಗಿರುವ ಆರ್. ವಿ. ದೇಶಪಾಂಡೆ ಅವರನ್ನೇ ಕಾಯಂ ಸ್ಪೀಕರ್ ಆಗಿ ಮಾಡಬೇಕೆಂಬುದು ಪಕ್ಷದ ನಾಯಕರ ಆಶಯವಾಗಿತ್ತು.ಆದರೆ ದೇಶಪಾಂಡೆಯವರು ಸ್ಪೀಕರ್ ಸ್ಥಾನ ಒಪ್ಪಿಕೊಳ್ಳಲು ಸಿದ್ದರಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯ್ಕೆಯಾದ ಕೇವಲ ಇಬ್ಬರು ಕಾಂಗ್ರೆಸ್ ಶಾಸಕರಲ್ಲಿ ಖಾದರ್ ಒಬ್ಬರು. ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಯು ಟಿ ಖಾದರ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ,ನಗರಾಭಿವೃದ್ಧಿ ಹಾಗೂ ವಸತಿ ಖಾತೆ ನಿಭಾಯಿಸಿದ ಅನುಭವ ಹೊಂದಿದ್ದಾರೆ.