ಬೆಂಗಳೂರು:ರಾಜ್ಯ ಸರ್ಕಾರದ ಚೊಚ್ಚಲ ವಿಧಾನ ಮಂಡಲ ಅಧಿವೇಶನವು ಜುಲೈ 3 ರಿಂದ ಆರಂಭಗೊಂಡಿದ್ದು ಜುಲೈ 14ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಬಜೆಟ್ ಮೇಲಿನ ಚರ್ಚೆ ಹಾಗೂ ಹಣಕಾಸು ವಿಧೇಯಕದ ಅಂಗೀಕಾರ ಸೇರಿದಂತೆ ರಾಜ್ಯದ ಪ್ರಮುಖ ವಿಷಯಗಳ ಕುರಿತು ಹೆಚ್ಚಿನ ಚರ್ಚೆಗಳು ನಡೆಯಬೇಕಿರುವ ಕಾರಣದಿಂದ ಕಲಾಪ ಸಲಹಾ ಸಮಿತಿಯ ತೀರ್ಮಾನದ ಮೇರೆಗೆ ಅಧಿವೇಶನವನ್ನು ಜುಲೈ 21ರವರೆಗೆ ವಿಸ್ತರಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಘೋಷಿಸಿದ್ದಾರೆ.
ಜು. 7 ರಂದು ಸಿಎಂ ಸಿದ್ದರಾಮಯ್ಯ ಅವರು 2023 -24ನೇ ಸಾಲಿನ ಹೊಸ ಬಜೆಟ್ ಮಂಡಿಸಲಿದ್ದು, ಜು. 10ರಿಂದ 19ರವರೆಗೆ ಬಜೆಟ್ ಮೇಲಿನ ಸಾಮಾನ್ಯ ಚರ್ಚೆ ನಡೆಯಲಿದ್ದು, ಜು. 20 ರಂದು ಬಜೆಟ್ ಹಾಗೂ ಹಣಕಾಸು ವಿಧೇಯಕಗಳ ಅಂಗೀಕಾರವಾಗಲಿದೆ.
ಈ ಬಾರಿಯ ವಿಧಾನ ಮಂಡಲದ ಅಧಿವೇಶನದಲ್ಲಿ ವಿಪಕ್ಷ ಜೆಡಿಎಸ್ ನಾಯಕ ಕುಮಾರಸ್ವಾಮಿ ಸರ್ಕಾರದ ಮೇಲೆ ಮುಗಿಬೀಳಲಿದ್ದು ಇತ್ತ ಬಿಜೆಪಿ ಕೂಡ ಗ್ಯಾರಂಟಿಗಳ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರಣತಂತ್ರ ರೂಪಿಸಿದೆ.