ಕಿನ್ನಿಗೋಳಿ :ಜಿಲ್ಲಾ ಪ್ರಶಸ್ತಿ ವಿಜೇತ, ಸಾಧನಾ ರಾಜ್ಯ ಪ್ರಶಸ್ತಿ ಹಾಗೂ ಕರ್ನಾಟಕ ಸಂಘ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ಪಕ್ಷಿಕೆರೆ ಇದರ ನೇತೃತ್ವದಲ್ಲಿ ಯುವಕಾರ್ಯ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದ ಎರಡು ಮನೆಗಳ ದುರಸ್ತಿಗಾಗಿ ಅಂತರ್ ರಾಜ್ಯ ಮಟ್ಟದ ವಾಲಿಬಾಲ್ ಸ್ಪರ್ಧೆಯ ಆದಾಯದಲ್ಲಿ ಪ್ರಥಮ ಹಂತವಾಗಿ ಕೆಮ್ರಾಲ್ ಕೆರೆಮನೆ ಶ್ರೀಮತಿ ಲೀಲಾವತಿ ಶೆಡ್ತಿ ಇವರ ಮನೆಯ ಬೀಳುವ ಹಂತದಲ್ಲಿದ್ದ ಮೇಲ್ಚಾವಣಿಯನ್ನು ಹಾಗೂ ಮನೆಯನ್ನು ಸುಮಾರು ರೂ. 75,೦೦೦/- ವೆಚ್ಚದಲ್ಲಿ ಹಾಗೂ ಮಂಡಳಿಯ ಸದಸ್ಯರ ಶ್ರಮದಾನದಿಂದ ದುರಸ್ತಿಮಾಡಿ ಕೊಡಲಾಯಿತು.

ಈ ಕಾರ್ಯದಲ್ಲಿ ಮಂಡಳಿಯ ಗೌರವಾಧ್ಯಕ್ಷ ಧನಂಜಯ ಶೆಟ್ಟಿಗಾರ್, ಅಧ್ಯಕ್ಷ ಯತೀಶ್, ಕಾರ್ಯದರ್ಶಿ ಶರತ್ ಹಾಗೂ ಮಂಡಳಿಯ ಸದಸ್ಯರು ಭಾಗವಹಿಸಿದರು.

