ಮುಂಬಯಿ: ಮುಂಬಯಿನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ 303 ರನ್ ಗಳ ಭರ್ಜರಿ ಜಯ ಗಳಿಸಿದೆ. ಈ ಬೃಹತ್ ಜಯದ ಮೂಲಕ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ಸ್ ಪ್ರವೇಶಿಸಿದೆ. ಟಾಸ್ ಗೆದ್ದು ನಂತರ ಶ್ರೀಲಂಕಾ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 50 ಓವರ್ ಗಳಲ್ಲಿ ಭಾರತ ಕ್ರಿಕೆಟ್ ತಂಡ 7 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು.
ಟೀಮ್ ಇಂಡಿಯಾ ನೀಡಿದ 358 ರನ್ನುಗಳ ಗುರಿ ಬೆನ್ನತ್ತಿದ ಲಂಕಾ ತಂಡಕ್ಕೆ ಭಾರೀ ಆಘಾತ ಎದುರಾಯಿತು. ರನ್ ಗಳಿಸದೇ ಲಂಕಾದ ವಿಕೆಟ್ ಪತನ ಆರಂಭವಾಯಿತು ಬಳಿಕ ಭಾರತದ ವೇಗದ ಬೌಲರ್ ಗಳಾದ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿಗೆ ಸಿಂಹಳೀಯ ಬ್ಯಾಟರ್ ಗಳು ಅಕ್ಷರಶಃ ಪತರಗುಟ್ಟಿ ಹೋದರು.ಒಂದು ಹಂತದಲ್ಲಿ ಕೇವಲ ,4 ರನ್ನುಗಳಿಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.
ಕೊನೆಗೂ ಶ್ರೀಲಂಕಾ ತಂಡದ ಯಾವುದೇ ಆಟಗಾರನೂ ಕೂಡ ಕ್ ಭಾರತದ ಬೌಲರ್ ಗಳನ್ನು ಎದುರಿಸಲಾಗದೇ ಒಬ್ಬರಾದ ಮೇಲೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಲಂಕಾ ಕೇವಲ 19.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 55 ರನ್ ಗಳಿಸಿ ಭಾರತದ ವಿರುದ್ಧ ಹೀನಾಯವಾಗಿ ಸೋತಿದೆ.
ಮೊಹಮ್ಮದ್ ಸಿರಾಜ್ 16 ರನ್ ನೀಡಿ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 5 ವಿಕೆಟ್ ಪಡೆದು 18 ರನ್ ನೀಡಿ ಅತ್ಯುತ್ತಮ ಬೌಲರ್ ಗಳೆನಿಸಿದರು. ಎಲ್ಲಾ 7 ಪಂದ್ಯಗಳಲ್ಲೂ ಜಯಗಳಿಸಿರುವ ಭಾರತ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡ ಇದೆ.