ಲಖನೌ(ಏ.29): ವಿಶ್ವಹಿಂದೂ ಪರಿಷತ್ ನಾಯಕ ನಂದಕಿಶೋರ್ ರುಂಗ್ತಾ ಹಾಗೂ ಬಿಜೆಪಿ ಶಾಸಕ ಕೃಷ್ಣಾನಂದ ರೈ ಕಿಡ್ನಾಪ್ ಹಾಗೂ ಹತ್ಯೆ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ಪ್ರಕಟಗೊಂಡಿದೆ. ಈ ಕೊಲೆಯ ಪ್ರಮುಖ ಆರೋಪಿ , ಬಹುಜನ ಸಮಾಜವಾದಿ ಪಾರ್ಟಿ ನಾಯಕ ಮುಖ್ತರ್ ಅನ್ಸಾರಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿ, 10 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಕೋರ್ಟ್ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಮುಖ್ತರ್ ಅನ್ಸಾರಿ ಸಹೋದರ ಅಫ್ಜಲ್ ಅನ್ಸಾರಿ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ.
ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಯಲ್ಲಿರುವ ಮುಖ್ತರ್ ಅನ್ಸಾರಿ 5 ಬಾರಿ ಶಾಸಕನಾಗಿ ಮೆರೆದಿದ್ದ. ಇದೇ ಅವಧಿಯಲ್ಲಿ ಮುಖ್ತರ್ ಅನ್ಸಾರಿ ಮೇಲೆ ಹಲವು ಕೊಲೆ ಹಾಗೂ ಕಿಡ್ನಾಪ್ ಪ್ರಕರಣ ದಾಖಲಾಗಿದೆ. 1996ರಲ್ಲಿ ವಿಶ್ವಹಿಂದೂ ಪರಿಷತ್ ನಾಯಕ ನಂದಕಿಶೋರ್ ರುಂಗ್ತ ಹಾಗೂ 2005ರಲ್ಲಿ ಬಿಜೆಪಿ ನಾಯಕ ಕೃಷ್ಣಾನಂದ ರೈ ಅಹರಣ ಹಾಗೂ ಕೊಲೆ ಪ್ರಕರಣದಲ್ಲಿ ಇದೀಗ ಕೋರ್ಟ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ ತೀರ್ಪು ನೀಡಿದೆ.
ಸುದೀರ್ಘ ವಿಚಾರಣೆ ಬಳಿಕ ಘಾಜಿಪುರ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಷ್ಟಕ್ಕೆ ಅನ್ಸಾರಿ ಮೇಲಿ ದೂರು ಹಾಗೂ ವಿಚಾರಣೆ ಮುಗಿದಿಲ್ಲ. ಕಳೆದ ವರ್ಷ 2001ರಲ್ಲಿ ನಡೆದ ಉಸುರಿ ಚತ್ತಿ ಗ್ಯಾಂಗ್ ವಾರ್ ಘಟನೆಯ ಪ್ರಮುಖ ರೂವಾರಿಯಾಗಿದ್ದ ಅನ್ಸಾರಿ ಮೇಲೆ ಕೇಸ್ ದಾಖಲಾಗಿತ್ತು. ಕಳೆದ ವರ್ಷ ಮುಖ್ತರ್ ಅನ್ಸಾರಿ ವಿರುದ್ದ ಘಾಜಿಪುರ ಕೋರ್ಟ್ 5 ಪ್ರಕರಣ ಸಂಬಂಧ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದೀಗ ಮತ್ತೆರೆಡು ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದ್ದು ಮತ್ತೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಿದ ಪ್ರಕರಣಗಳಲ್ಲಿ ಘಾಜಿಪುರ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಪೇದೆ ಕೊಲೆ ಪ್ರಕರಣವೂ ಸೇರಿದೆ. ಈ ಕೊಲೆಯಲ್ಲೂ ಮುಖ್ತರ್ ಅನ್ಸಾರಿ ಅಪರಾಧಿ ಎಂದು ಸಾಬೀತಾಗಿತ್ತು. ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್, ಮಾಫಿಯಾ ಡಾನ್ ಎಂದೇ ಗುರುತಿಸಿಕೊಂಡಿದ್ದ ಮುಖ್ತರ್ ಅನ್ಸಾರಿ ಇದೀಗ ಜೈಲಿನಲ್ಲೇ ಕೊಳೆಯಬೇಕಾಗಿದೆ.