Share this news

ಕರಾಚಿ, ಡಿ.19: ಭಾರತದ ವಿರುದ್ಧ ಭೀಕರ ಬಾಂಬ್ ದಾಳಿ ಹಾಗೂ ಭಯೋತ್ಪಾದಕ ದಾಳಿ ನಡೆಸಿರುವ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿರುವ ಉಗ್ರ ದಾವೂದ್ ಇಬ್ರಾಹಿಂ ವಿಷಪ್ರಾಶನದಿಂದ ಆಸ್ಪತ್ರೆಗೆ ದಾಖಲಾಗಿದ್ದ,ಆದರೆ ಈತ ಮೃತಪಟ್ಟಿದ್ದಾನೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ದಾವೂದ್ ಇಬ್ರಾಹಿಂ ನನ್ನು ಪಾಕಿಸ್ತಾನದಲ್ಲೇ ಹತ್ಯೆ ಮಾಡಿರುವ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ರಾಜಾತಿಥ್ಯದಲ್ಲಿದ್ದ ದಾವುದ್ ಇಬ್ರಾಹಿಂ ಹತ್ಯೆಯಾಗಿದ್ದಾರೆ ಅನ್ನೋ ಮಾಹಿತಿಯನ್ನು ಪಾಕಿಸ್ತಾನದ ಕೆಲ ಮಾಧ್ಯಮಗಳು ಖಚಿತಪಡಿಸಿದೆ. ಇಷ್ಟೇ ಅಲ್ಲ ಇದರ ಕ್ರೆಡಿಟ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಲಿದೆ ಎಂದು ಅಭಿಪ್ರಾಯವನ್ನೂ ವ್ಯಕ್ತಪಡಿಸಿರುವುದು ಅಚ್ಚರಿ‌ ಮೂಡಿಸಿದೆ.

 

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

 

ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ಸ್, ಸೋಶಿಯಲ್ ಮಿಡಿಯಾಗಳಲ್ಲಿ ದಾವುದ್ ಇಬ್ರಾಹಿಂ ಹತ್ಯೆ ಸುದ್ದಿ ಹರಿದಾಡುತ್ತಿದೆ. ಇದೇ ವೇಳೆ ಹಲವು ಮಾಧ್ಯಮಗಳು ಈಸುದ್ದಿಯನ್ನು ಖಚಿತಪಡಿಸಿದೆ. ಈ ಪೈಕಿ ಪಾಕಿಸ್ತಾನದ ಅತ್ಯಂತ ಜನಪ್ರಿಯ ಶೈಲಾ ಖಾನ್ ಡಿಬೇಟ್ ಯೂಟ್ಯೂಬ್ ಚಾನೆಲ್ ದಾವುದ್ ಇಬ್ರಾಹಿಂ ಹತ್ಯೆ ಸುದ್ದಿಯನ್ನು ಖಚಿತಪಡಿಸಿದೆ. ಈ ಚಾನೆಲ್ ಮೂಲಕ ನೆಡೆಸಿರುವ ಚರ್ಚೆಯಲ್ಲಿ ಪಾಕಿಸ್ತಾನದ ಖ್ಯಾತ ಮೀಡಿಯಾ ಪ್ಯಾನಲಿಸ್ಟ್ ಆಗಿರುವ ಮುಜಾಫರ್ ಅವರು ಡಿಬೇಟ್ ನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ದೃಷ್ಟಿಯಿಂದ ಹಾಗೂ ನನ್ನ ದೃಷ್ಟಿಯಿಂದ ದಾವುದ್ ಇಬ್ರಾಹಿಂ ಹತ್ಯೆ ಸಿಹಿ ಸುದ್ದಿ ಎಂದಿದ್ದಾರೆ. ಪಾಕಿಸ್ತಾನದಲ್ಲಿ ಈ ಕುರಿತು ಭಾರಿ ಸಂಚಲನ ಸೃಷ್ಟಿಯಾಗಿದೆ. ಭಾರತದ ಮೇಲೆ ದಾವುದ್ ನಡೆಸಿದ ದಾಳಿ, ಬಾಂಬ್ ಸ್ಫೋಟ, ಡ್ರಗ್ಸ್, ಖೋಟಾ ನೋಟು ದಂಧೆಗಳಿಂದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ.ಭಾರತದಲ್ಲಿ ಮುಸ್ಲಿಮರು ಹಿಂದೂಗಳ ನಡುವೆ ವಿಷಬೀಜ ಬಿತ್ತಿದ್ದ. ಪಾಕಿಸ್ತಾನದಲ್ಲಿರುವ ಭಾರತ ವಿರೋಧಿ ಉಗ್ರರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ. ಇದೀಗ ದಾವುದ್ ಹತ್ಯೆಯಾಗಿದೆ. ನಾನು ಈ ಸುದ್ದಿಯಿಂದ ಬಹಳ ಖುಷಿಯಾಗಿದ್ದೇನೆ ಎಂದು ಮುಜಾಫರ್ ಹೇಳಿದ್ದಾರೆ.
ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾನೆ ಎಂಬ ಭಾರತದ ವಾದವನ್ನು ಪಾಕಿಸ್ತಾನ ನಿರಾಕರಿಸುತ್ತಲೇ ಬಂದಿತ್ತು. ಆದರೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಹಾಗೂ ದಾವುದ್ ಇಬ್ರಾಹಿಂ ಸಂಬಂಧಿ ಜಾವೇದ್ ಮಿಯಾಂದಾದ್ ಅವರು ದಾವೂದ್ ಪಾಕಿಸ್ತಾನದಲ್ಲೇ ಇದ್ದಾರೆ ಎನ್ನುವುದನ್ನು ಈ‌ ಹಿಂದೆ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದರು. ಇದೀಗ ಹತ್ಯೆಯಿಂದ ಎಲ್ಲವೂ ಬಹಿರಂಗವಾಗಿದೆ. ಕರಾಚಿ ಢಿಫೆನ್ಸ್ ಕಾಲೋನಿಯಲ್ಲಿ, ಲಾಹೋರ್‌ನಲ್ಲಿ ದಾವುದ್ ಮನೆ ಇದೆ. ಈತ ಪಾಕಿಸ್ತಾನದಲ್ಲೇ ಇದ್ದ ಅನ್ನೋದು ಸತ್ಯ. ಆದರೆ ದಾವುದ್‌ನ ಟ್ರೇಸ್ ಮಾಡಿ ಹತ್ಯೆ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ. ಭಾರತದ ಎಜೆನ್ಸಿ ಇದೆಯೋ ಅಥವಾ ಪಾಕಿಸ್ತಾನವೇ ದಾವೂದ್ ಹತ್ಯೆ ಮಾಡಿರಬಹುದೇ ಎನ್ನುವ ಕುರಿತು ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ ಎಂದು ಮುಜಾಫರ್ ಹೇಳಿದ್ದಾರೆ.

ಆತ ಮಧ್ಯ ರಾತ್ರಿ 1ಗಂಟೆ ಸುಮಾರಿಗೆ ಮೃತಪಟ್ಟಿದ್ದಾನೆ. ಭಾರತದಲ್ಲಿರುವ ನಮ್ಮ ಸಹೋದರರಿಗೆ ಇದು ಅತ್ಯಂತ ಖುಷಿಯ ಸುದ್ದಿ. ಇಷ್ಟೇ ಅಲ್ಲ ವೈಯುಕ್ತಿಕವಾಗಿ ನನಗೂ ಹೆಚ್ಚು ಖುಷಿ ನೀಡಿದೆ. ದಾವೂದ್ ಹಾಗೂ ಆತನ ಗ್ಯಾಂಗ್ ಭಾರತ ವಿರುದ್ಧ ಯಾವೆಲ್ಲಾ ದಾಳಿ, ಅಕ್ರಮ ನಡೆಸಿದೆ ಅನ್ನೋದು ಜಗತ್ತಿಗೆ ತಿಳಿದಿದೆ ಎಂದು ಮುಜಾಫರ್ ಹೇಳಿದ್ದಾರೆ. ಭಾರತದ ಮೋಸ್ಟ್ ವಾಂಟೆಡ್ ಉಗ್ರರು ಪಾಕಿಸ್ತಾನದಲ್ಲಿ ಒಬ್ಬೊಬ್ಬರಾಗಿ ಹತರಾಗುತ್ತಿದ್ದಾರೆ. ಇದರ ಕ್ರೆಡಿಟ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಲಿದೆ. ಮೋದಿ ಈಗಾಗಲೇ ನಾವು ಶತ್ರುರಾಷ್ಟ್ರದ ಒಳಗೆ ನುಗ್ಗಿ ಉಗ್ರರ ಸದೆಬಡಿಯುತ್ತೇವೆ ಎಂದಿದ್ದರು. ಇದೇ ರೀತಿ ಮಾಡಿದರು. ಇದೀಗ ಪಾಕಿಸ್ತಾದನಲ್ಲಿ ಅತೀ ಹೆಚ್ಚು ಸುರಕ್ಷತೆಯಲ್ಲಿದ್ದ ವಾಂಟೆಡ್ ಉಗ್ರರನ್ನು ಹೊಡೆದುರುಳಿಸುವ ಕಾರ್ಯವಾಗುತ್ತಿದೆ. ಇದರ ಹಿಂದೆ ಯಾರಿದ್ದಾರೇ ಅನ್ನೋದು ಪತ್ತೆಯಾಗಬೇಕಿದೆ. ಆದರೆ ಸದ್ಯಕ್ಕೆ ಇದರ ಎಲ್ಲಾ ಶ್ರೇಯಸ್ಸು ಮೋದಿಗೆ ಸಲ್ಲಲಿದೆ ಎಂದು ಮುಜಾಫರ್ ಹೇಳಿದ್ದಾರೆ.

 

Leave a Reply

Your email address will not be published. Required fields are marked *