ಹೆಬ್ರಿ : ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧರೊಬ್ಬರು ವಿಷ ಸೇವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ನಾಡ್ಪಾಲು ಗ್ರಾಮ ಸೀತಾನದಿ ಎಂಬಲ್ಲಿನ ಕುಶಲ ಶೆಟ್ಟಿ (77ವ) ಅವರಿಗೆ ಕಳೆದ 5 ವರ್ಷಗಳ ಹಿಂದೆ ಮೆದುಳಿಗೆ ಪಾರ್ಶ್ವವಾಯು ಉಂಟಾಗಿತ್ತು, ಅಲ್ಲದೆ ಬಿಪಿ ಮತ್ತು ಶುಗರ್‌ನಿಂದ ಬಳಲುತ್ತಿದ್ದರು.
ಇತ್ತೀಚೆಗೆ ಅವರ ಬಿಪಿ ಮತ್ತು ಶುಗರ್ ಉಲ್ಬಣಗೊಂಡಿದ್ದು, ಇದೇ ಕಾರಣಕ್ಕೆ ಮನನೊಂದು ಕುಶಲ ಅವರು ಫೆ.23ರಂದು ವಿಷ ಸೇವಿಸಿ ಅಸ್ವಸ್ಥರಾಗಿದ್ದ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಂದು (ಫೆ.24) ಮೃತಪಟ್ಟಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.