ಮೂಡುಬಿದಿರೆ: ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ವೈಬ್ರಂಟ್ ನೀಟ್ ಲಾಂಗ್ ಟರ್ಮ್ ಕೋಚಿಂಗ್ ಸಂಸ್ಥೆಯು ಪ್ರಸ್ತುತ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ರಾಷ್ಟೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಕಳೆದ ಸಾಲಿನ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ವೈಬ್ರಂಟ್ ನೀಟ್ ಲಾಂಗ್ ಟರ್ಮ್ ಕೋಚಿಂಗ್ ಸಂಸ್ಥೆಗೆ ಸೇರಿ ಸರ್ಕಾರಿ ವೈದೈಕೀಯ ಸೀಟ್ ಪಡೆಯಲು ಅರ್ಹತಾ ಅಂಕಗಳನ್ನು ಗಳಿಸಿರುತ್ತಾರೆ. ಕೆಟಗರಿ ವಿಭಾಗದಲ್ಲಿ ಅಲ್ ಇಂಡಿಯಾ ರ‍್ಯಾಂಕ್‌ನಲ್ಲಿ ವಿ.ವಿನಯ್ ಕುಮಾರ್ 160ನೇ ರ‍್ಯಾಂಕ್ ಪಡೆಯುವುದರ ಮೂಲಕ ಉತ್ತಮ ಸಾಧನೆ ಮಾಡಿರುತ್ತಾರೆ. 7 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳನ್ನು ,120 ವಿದ್ಯಾರ್ಥಿಗಳು 450ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ.

ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಲ್ಲಿ ಸ್ವಾತಿ ಕೆ. ಸುನಧೋಳಿ 651, ಟಿ.ಆರ್.ಮನ್ವಿತಾ 629, ಡಿ.ಧನುಷ್ 614, ಯತೀಶ್ ಗೌಡ 606, ಕೆ.ಆರ್. ಲಕ್ಷಿö್ಮ 606, ವೈಷ್ಣವಿ ಡಿ.ರಾವ್ 603, ಎಸ್.ಆರ್.ಭರತ್ ಗೌಡ 602, ಎಂ. ಸಿದ್ದರೂಡ್ 595, ಜಸ್ಟನ್ ಮೆನೇಜಸ್ 592, ವಿ.ವಿನಯ್ ಕುಮಾರ್ 588, ಬಿ.ಛಾಯಾ 587, ವಿ.ಕೆ. ಶಿವರಾಜ್ 583, ಕೆ.ಎಲ್. ಪೃಥ್ವಿ 581, ರವಿ ನಿಂಗಪ್ಪ 580, ಮಾರುತಿ ಮಹದೇವು 580, ಪ್ರೀಥಮ್ ಡಿ ಅರಸ್ 579, ಬಿ.ಎನ್. ತೇಜಶ್ರೀ 577, ರಮೇಶ್ 574, ಪಿ.ಎಂ. ಪ್ರಸನ್ನ 573, ಎ.ಪಿ. ಸೋಮಶೇಖರ್ 558, ಅನಿಕೇತ್ ಸಜ್ಜನ್ 568, ಸಚಿನ್ ಅರವಿಂದ್ 567, ಉಮ್ಮೆ ಸಾನಿಯಾ 566, ಸಮಿಉಲ್ಲಾ ಶಂಶುದ್ದಿನ್ 556, ಸಾಕ್ಷಿ ಸಜ್ಜನ್ 554, ವಿ. ಸಾಗರ್ 552, ಕೆ.ಬಿ.ತೇಜಸ್ವಿನಿ 551 ಎಸ್.ಎಂ.ಅಪೂರ್ವ 551 ಅಂಕಗಳನ್ನು ಪಡೆಯುವುದರೊಂದಿಗೆ ಅಮೋಘ ಸಾಧನೆ ಮಾಡಿರುತ್ತಾರೆ.

ವಿದ್ಯಾರ್ಥಿಗಳ ಈ ಅತ್ಯುನ್ನತ ಸಾಧನೆಗೆ ವೈಬ್ರಂಟ್ ಅಕಾಡೆಮಿ ಫಾರ್ ಇನ್ನೋವೇಟಿವ್ ಲರ್ನಿಂಗ್ ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ

