ನವದೆಹಲಿ: ಬಾಲಸೋರ್ ರೈಲು ಅಪಘಾತದ ಬಗ್ಗೆ ಸಿಬಿಐ ಸೋಮವಾರ ತನ್ನ ತನಿಖೆಯನ್ನು ಪ್ರಾರಂಭಿಸುತ್ತಿದ್ದಂತೆ, ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ಉದ್ದೇಶಪೂರ್ವಕ ಹಸ್ತಕ್ಷೇಪದಿಂದಾಗಿ ಅಪಘಾತ ಸಂಭವಿಸಿದೆ ಎಂದು ಉನ್ನತ ರೈಲ್ವೆ ಅಧಿಕಾರಿಗಳು ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಈಗಾಗಲೇ ಸಿಬಿಐ ತನಿಖೆ ಆರಂಭಿಸಿದ್ದು, ಘಟನಾಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಲು ಆರಂಭಿಸಿದ್ದಾರೆ.ಎಲ್ಲಾ ಮಾಹಿತಿ ಸಂಗ್ರಹದ ಬಳಿಕ ಕೋರಮಂಡಲ್ ಎಕ್ಸ್ಪ್ರೆಸ್ ಹಳಿ ತಪ್ಪಲು ನಿರ್ಲಕ್ಷ್ಯ ಅಥವಾ ವಿಧ್ವಂಸಕತೆಯೇ ಕಾರಣವೇ ಎಂದು ಬಹಿರಂಗಪಡಿಸುವ ನಿರೀಕ್ಷೆಯಿದೆ.
ಬಹನಾಗ ಬಜಾರ್ ನಿಲ್ದಾಣದ ಕ್ಯಾಬಿನ್ನಲ್ಲಿ ಇಂಟರ್ಲಾಕಿಂಗ್ ವ್ಯವಸ್ಥೆಯ “ತರ್ಕ” ದೊಂದಿಗೆ ಒಂದು ರೀತಿಯ “ಹಸ್ತಚಾಲಿತ ಟಿಂಕರಿಂಗ್” ಮಾಡಲಾಗಿದೆ ಎಂದು ರೈಲ್ವೆಯ ಆರಂಭಿಕ ತನಿಖೆಯಲ್ಲಿ ಕಂಡುಬಂದಿದೆ ಅಮತ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಈ “ದೋಷರಹಿತ ವ್ಯವಸ್ಥೆ”ಯೊಂದಿಗೆ ಅಂತಹ ತಿರುಚುವಿಕೆಯ ಉದ್ದೇಶವನ್ನು ಕಂಡುಹಿಡಿಯಲು ಸಿಬಿಐ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.