ಕಾರ್ಕಳ : ಕಾರ್ಕಳದ ವ್ಯಕ್ತಿಯೊಬ್ಬರು ಆನ್ಲೈನ್ ವಂಚನೆಗೆ ಒಳಗಾಗಿ 7.63 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
ಹಿರ್ಗಾನ ಗ್ರಾಮದ ಎಲಿಜಾ ಲೋಬೋ ವಂಚನೆಗೊಳಗಾದವರು.ಕಾರ್ಕಳದ ಎಸ್ ಬಿ ಐ ಮತ್ತು ಐಸಿಐಸಿಐ ಬ್ಯಾಂಕ್ ಗಳಲ್ಲಿ ಎಸ್ ಬಿ ಖಾತೆಗಳನ್ನು ಹೊಂದಿದ್ದಾರೆ . ಫೆಲಿಕ್ಸ್ ಡಯಾಸ್ ಎಂಬ ವ್ಯಕ್ತಿಯೊಬ್ಬ ಫೇಸ್ ಬುಕ್ ಖಾತೆ ಮೂಲಕ ಆತ ಯುರೋಪ್ ನ ಸೈಪ್ರಸ್ ನಲ್ಲಿ ಇದ್ದಾನೆ ಎಂದು ನಂಬಿಸಿದ್ದ. ಅಲ್ಲದೆ ವ್ಯಾಲೆಂಟೈನ್ ಡೇ ಗೆ ಉಡುಗೊರೆಯಾಗಿ ಪಾರ್ಸೆಲ್ ಗಳನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದ. ಅಲ್ಲದೆ ಆತ ಫೆಬ್ರವರಿ 13ರಂದು ಎಲಿಜಾ ಲೋಬೋ ಎಲಿಜಾ ಲೋಬೋ ಅವರಿಗೆ ವಾಟ್ಸಪ್ ಸಂಖ್ಯೆಗೆ ಪಾರ್ಸೆಲ್ ಗಳ ಫೋಟೋ ಕೂಡ ಕಳಿಸಿದ್ದ.
ಆ ಬಳಿಕ ದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿ ಎಂದು ಹೇಳಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ 9870189535 ನಂಬರ್ ನಿಂದ ಕರೆ ಮಾಡಿ ಪಾರ್ಸೆಲ್ ಪಡೆದುಕೊಳ್ಳುವುದಕ್ಕಾಗಿ 47,000 ರೂ. ಪಾವತಿಸುವಂತೆ ಸೂಚಿಸಿದ್ದ. ಇದನ್ನು ನಂಬಿದ್ದ ವ್ಯಕ್ತಿ ಆತ ತಿಳಿಸಿದ ಖಾತೆಗೆ ಹಣ ವರ್ಗಾಯಿಸಿದ್ದರು. ಬಳಿಕ ವಂಚಕ ವಿವಿಧ ಕಾರಣಗಳನ್ನು ನೀಡಿ ಹಣ ಕಳುಹಿಸುವಂತೆ ಒತ್ತಡ ಹಾಕುತ್ತಿದ್ದ .ಆತನ ಒತ್ತಡಕ್ಕೆ ಮಣಿದ ಎಲಿಜಾ ಲೋಬೋ ಅವರಿಗೆ 7.63 ಲಕ್ಷ ರೂ ವರ್ಗಾಯಿಸಿದ ಬಳಿಕ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಈ ಪ್ರಕರಣದ ಕುರಿತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ