ಕಾರ್ಕಳ: ಕೆ.ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಶತನಮನ ಶತಸನ್ಮಾನ ಕಾರ್ಯಕ್ರಮವು ಕಾರ್ಕಳದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಸಹಯೋಗದಲ್ಲಿ ಇಲ್ಲಿನ ಸರಕಾರಿ ಹೈಸ್ಕೂಲ್ ಸಭಾಭವನದಲ್ಲಿ ನ. 15ರಂದು ಜರಗಿತು. ಕಾರ್ಯಕ್ರಮದಲ್ಲಿ ಆರು ಮಂದಿ ಸಾಹಿತ್ಯಾಸಕ್ತ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ಸರಣಿ ಸನ್ಮಾನ ಕಾರ್ಯಕ್ರಮದ 55ನೆಯ ಸನ್ಮಾನವನ್ನು ದ್ವಿಭಾಷಾ ಸಾಧಕಿ ಸುಲೋಚನ ತಿಲಕ್, 56ನೇ ಸನ್ಮಾನವನ್ನು ನಿವೃತ್ತ ಶಿಕ್ಷಕಿ ಸಾಹಿತಿ ಸಾವಿತ್ರಿ ಮನೋಹರ್, 57ನೆಯ ಸನ್ಮಾನವನ್ನು ಸಾಹಿತಿ, ನಿವೃತ್ತ ಆಂಗ್ಲಭಾಷಾ ಉಪನ್ಯಾಸಕಿ ಶ್ಯಾಮಲಾ ಕುಮಾರಿ ಬೇವಿಂಜೆ, 58ನೆಯ ಸನ್ಮಾನವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿಯ ಅಧ್ಯಕ್ಷೆ .ಮಿತ್ರಪ್ರಭಾ ಹೆಗ್ಡೆ 59ನೆಯ ಸನ್ಮಾನವನ್ನು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಸಂಘಟಕಿ ಮಾಲತಿ ವಸಂತರಾಜ್ ಹಾಗೂ 60ನೆಯ ಸನ್ಮಾನವನ್ನು ಸಾಹಿತಿ ಮತ್ತು ಪತ್ರಿಕಾ ಬರಹಗಾರ್ತಿ ಮನೋರಮಾ ರೈ ಅವರಿಗೆ ನೀಡಿ ಗೌರವಿಸಲಾಯಿತು. ಕೆ. ಎನ್. ಭಟ್ ಶಿರಾಡಿಪಾಲ್ ಅವರ ಪುತ್ರಿಯರಾದ ಅನುಪಮಾ ಚಿಪ್ಳೂಣಕರ್, ವಿದ್ಯಾ ಡೋಂಗ್ರೆ ಮತ್ತು ನಿವೇದಿತಾ ಗಜೇಂದ್ರ ಸನ್ಮಾನಿತರನ್ನು ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ಹಿರಿಯ ಸಾಧಕಿಯರಾದ ಶ್ಯಾಮಲಾ ಕುಮಾರಿ ಬೇವಿಂಜೆ ಮತ್ತು ಸಾವಿತ್ರಿ ಮನೋಹರ್ ಅವರು ಶಿರಾಡಿಪಾಲರ ಜೊತೆಗಿನ ತಮ್ಮ ಒಡನಾಟದ ಅನುಭವವನ್ನು ಹಂಚಿಕೊAಡರು. ಸುಲೋಚನಾ ಬಿ.ವಿ., ವಸುಧಾ ಶೆಣೈ, ಶಕುಂತಲಾ ಅಡಿಗ, ಡಾ. ಸುಮತಿ ಪಿ., ನಿವೇದಿತಾ ಗಜೇಂದ್ರ ಹಾಗೂ ಇಂದಿರಾ ಸನ್ಮಾನ ಪತ್ರ ವಾಚಿಸಿದರು. ಅನುಪಮಾ ಚಿಪ್ಳೂಣಕರ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುರಾರಿ ಚಿಪ್ಳೂಣಕರ್, ವಸಂತ ಡೋಂಗ್ರೆ ಉಪಸ್ಥಿತರಿದ್ದರು. ವಿದ್ಯಾ ಡೋಂಗ್ರೆ ಸ್ವಾಗತಿಸಿದರು. ಸಂಘಟಕ ಕೃಷ್ಣಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ಪ್ರಾಂಶುಪಾಲರಾದ ಮಿತ್ರಪ್ರಭಾ ಹೆಗ್ಡೆ ವಂದಿಸಿದರು. ಜಾಗೃತಿ ಸಂಘಟನೆಯ ಕಾರ್ಯದರ್ಶಿ ಮಾಲತಿ ಜಿ. ಪೈ ಕಾರ್ಯಕ್ರಮ ನಿರೂಪಿಸಿದರು