ಮೂಡುಬಿದಿರೆ: ಮೂಡುಬಿದಿರೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಆಳ್ವಾಸ್ ಮೈಟ್, ಧವಲ ಹಾಗೂ ಮಹಾವೀರ ಕಾಲೇಜಿನ ಮುಂಭಾಗದಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲಿ ವಾರದ ಒಳಗೆ ಹಂಪ್ಸ್ಅಳವಡಿಸುವಂತೆ ಶಾಸಕ ಉಮಾನಾಥ ಕೋಟ್ಯಾನ್ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಅವರು ಮೂಡಬಿದಿರೆ ಕನ್ನಡ ಭವನದಲ್ಲಿ ನಡೆದ ಕಾಲೇಜು ವಿದ್ಯಾರ್ಥಿ ಕಾರ್ತಿಕ್ ಆಚಾರ್ಯ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳನ್ನಿರಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಆರ್‌ಟಿಓ ಸಹಿತ ವಿವಿಧ ಇಲಾಖಾಧಿಕಾರಿಗಳು, ಬಸ್ ಮಾಲೀಕರು, ವಿದ್ಯಾರ್ಥಿ ಮುಖಂಡರು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು.
ವಾಹನಗಳ ಮಿತಿಮೀರಿದ ವೇಗವನ್ನು ನಿಯಂತ್ರಿಸಲು ಹಂಪ್ಸ್ ಗಳನ್ನು ಅಳವಡಿಸಬೇಕು. ಅಪಘಾತ ಪ್ರಕರಣ ಎದುರಿಸುತ್ತಿರುವ ರೇಷ್ಮಾ ಬಸ್ ಸಹಿತ ಯಾವುದೇ ಬಸ್ ಗಳು ಶಾಲಾ-ಕಾಲೇಜಿನ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ ಬಸ್ ಹತ್ತ ಬಾರದೆಂದು ಸೂಚಿಸುವಂತಿಲ್ಲ ಎಂದರು.
ಬಸ್ ಮಾಲೀಕರು ತಮ್ಮ ಬೇಡಿಕೆಗಲಿಗೆ ಸರಿಯಾಗಿ ಸ್ಪಂದಿಸದೆ ಇರುವುದರಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ಒದಗಿಸುವಂತೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಬಸ್ ಮಾಲೀಕರು ಸಂಘಟಿತರಾಗಿ ಪರಿಹಾರ ಧನ ಒದಗಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಿ ನಿರ್ಧರಿಸುವುದಾಗಿ ರಾಜವರ್ಮ ಬಲ್ಲಾಳ್ ಭರವಸೆ ನೀಡಿದರು. ಮಂಗಳೂರು ಮೂಡಬಿದಿರೆ ರಸ್ತೆಯಲ್ಲಿ ಸಂಚರಿಸುವ ಬಸ್ ಗಳಿಗೆ ಸಮಾನ ಸಮಯ ನಿಗದಿಗೊಳಿಸದ ಆರ್ ಟಿ ಓ ಕ್ರಮಕ್ಕೆ ಬಸ್ ಮಾಲೀಕ ಜೀವಂದರ್ ಅಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.
ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಮೂಡುಬಿದಿರೆ ವಲಯಾಧ್ಯಕ್ಷ ನಾರಾಯಣ ಪಿ.ಎಂ., ಜಿಲ್ಲಾಸ್ ಮಾಲಕರ ಸಂಘದ ಉಪಾಧ್ಯಕ್ಷ ಜೀವಂಧರ ಅಧಿಕಾರಿ, ಆ ಪುರಸಭಾ ಮುಖ್ಯಾಧಿಕಾರಿ ಶಿವ ನಾಯ್ಕ ಪಿಡಬ್ಲ್ಯೂಡಿ ಅಧಿಕಾರಿ, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಿನ್ಸಿಪಾಲರು ಉಪಸ್ಥಿತರಿದ್ದರು.