ಮುಲ್ಕಿ: ಶ್ರೀ ಕೃಷ್ಣ ಯುವಕರ ಆದರ್ಶ ಪುರುಷನಾಗಿ, ದೀನರ ದೈವವಾಗಿ, ಪಂಡಿತರ ಪಾಲಿಗೆ ಜ್ಞಾನಿಯಾಗಿ ಕಂಡು ಬರುತ್ತಾನೆ. ಮಹಾಭಾರತದುದ್ದಕ್ಕೂ ತಾನು ಜನಿಸಿದ್ದು ಧರ್ಮ ರಕ್ಷಣೆಗೆ ಅಂತಲೇ ಹೇಳುತ್ತಾ ಹೋಗುವ ಕೃಷ್ಣ, ಧರ್ಮ ರಕ್ಷಣೆಯ ಜೊತೆಗೆ ಅನೇಕ ಕಾರ್ಯಗಳನ್ನು ಕೂಡ ಮಾಡುತ್ತಾನೆ. ತುಂಟತನ, ಪ್ರೀತಿ, ಕರುಣೆ, ಗಡಸುತನ, ಹಠ, ಧರ್ಮ, ಜ್ಞಾನ – ಎಲ್ಲ ಮೇಳೈಸಿರುವ ಏಕೈಕ ವ್ಯಕ್ತಿತ್ವವೆಂದರೆ ಅದು ಭಗವಾನ್ ಶ್ರೀ ಕೃಷ್ಣ , ಇವರ ಜನ್ಮ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಅಭಿನಂದನೀಯ ಎಂದು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಿರ್ ಇದರ ಸ್ಥಾಪಕಾಧ್ಯಕ್ಷ ಲ. ವೆಂಕಟೇಶ್ ಹೆಬ್ಬಾರ್ ಹೇಳಿದರು.
ಇವರು ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಶಾರದ ಸೊಸೈಟಿಯ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕತಿಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ವಿಫಲವಾದರ, ಭಾರತದ ಸನಾತನ ನಾಗರಿಕತೆಗಳು ಕಣ್ಮರೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಚಿಕ್ಕಂದಿನಿಂದಲೇ ಮಕ್ಕಳಿಗೆ ಸಂಪ್ರದಾಯಗಳನ್ನು ಕಲಿಸಿಕೊಡುವಂತಹ ಕೆಲಸವಾಗಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಮುದ್ದುಕೃಷ್ಣ ಮತ್ತು ಬಾಲಕೃಷ್ಣ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳ ತಾಯಂದಿರಿಗೆ ಯಶೋದಾ ಕೃಷ್ಣ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಶಾರದ ಸೊಸೈಟಿಯ ಕಾರ್ಯದರ್ಶಿ ಪುರಂದರ ಶೆಟ್ಟಿಗಾರ್, ಕೋಶಾಧಿಕಾರಿ ಭುವನಾಭಿರಾಮ ಉಡುಪ, ನಿರ್ದೇಶಕರುಗಳಾದ ಪಟೇಲ್ ವಾಸುದೇವ ರಾವ್, ಸುರೇಶ್ ರಾವ್ ಪಿ ಎಸ್, ಶಾಲಾ ಸಂಚಾಲಕ ದೇವಪ್ರಸಾದ್ ಪುನರೂರು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಜಿತೇಂದ್ರ ವಿ ರಾವ್ ಸ್ವಾಗತಿಸಿ, ಸಹ ಶಿಕ್ಷಕಿ ದೀಕ್ಷಿತ ವಂದಿಸಿದರು, ಸಂದ್ಯಾ ನಿರೂಪಿಸಿದರು.