Share this news

ವದೆಹಲಿ: ಶಿರಾಡಿ ಘಾಟ್‌ನಲ್ಲಿ 23 ಕಿ.ಮೀ ಸುರಂಗ ಮಾರ್ಗದ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸಂಸದ ನಳೀನ್ ಕುಮಾರ್ ಕಟೀಲ್ ಟ್ವಿಟ್ ಮಾಡಿದ್ದು, ಬೆಂಗಳೂರು-ಮAಗಳೂರು ರಾಷ್ಟ್ರೀಯ ಹೆದ್ದಾರಿಯ ಮಾರನಹಳ್ಳಿ-ಅಡ್ಡಹೊಳೆ(ಶಿರಾಡಿ ಘಾಟ್) ಭಾಗದ ಚತುಷ್ಪತ ರಸ್ತೆ ಕಾಮಗಾರಿಗೆ 1976 ಕೋಟಿ ರೂ. ಮೊತ್ತದ ಬಿಡ್ ಆಹ್ವಾನಿಸಿದೆ. ಶಿರಾಡಿ ಘಾಟ್‌ನಲ್ಲಿ 15,000 ಕೋಟಿ ಮೊತ್ತದ 23 ಕಿ.ಮೀ ಸುರಂಗ ಮಾರ್ಗದ ವಿಸ್ತೃತ ಯೋಜನಾ ವರದಿಗೆ ಆದೇಶಿಸಿದೆ ಎಂದು ಹೇಳಿದ್ದಾರೆ.

ಇದರ ಜತೆಗೆ, ಬೆಂಗಳೂರು-ಮAಗಳೂರು ಹೆದ್ದಾರಿ ಭಾಗವಾದ ಸಕಲೇಶಪುರದಿಂದ ಮಾರನಹಳ್ಳಿವರೆಗಿನ ರಸ್ತೆ ಭಾಗದ ದುರಸ್ತಿಗೂ ನಿತಿನ್ ಗಡ್ಕರಿ ಅವರು ಆದೇಶಿಸಿದ್ದಾರೆ. ಈ ಎಲ್ಲ ಕಾಮಗಾರಿಗಳಿಂದ ಬೆಂಗಳೂರು-ಮAಗಳೂರು ರಸ್ತೆ ಸಂಚಾರ ಆರಾಮದಾಯಕವಾಗಲಿದೆ. ಬೆಂಗಳೂರು-ಮAಗಳೂರು ಸಂಚಾರದ ಅವಧಿ ಕಡಿಮೆಯಾಗಿ, ಪ್ರಯಾಣ ಸುಗಮವಾಗಲಿದೆ. ಇದಕ್ಕೆ ಅನುವು ಮಾಡಿಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *