ಅಜೆಕಾರು : ಅಂಡಾರು ನಿವಾಸಿ ರಮೇಶ್ ರಾವ್ ಎಂಬವರು ಶುಕ್ರವಾರ ತಮ್ಮ ಬೈಕಿನಲ್ಲಿ ಶಿರ್ಲಾಲಿನಿಂದ ಕೆರ್ವಾಶೆ ಕಡೆಗೆ ಹೋಗುತ್ತಿದ್ದಾಗ ಶಿರ್ಲಾಲು ಗ್ರಾಮದ ನಿಡ್ಡೆಪಾಡಿ ಗರಡಿ ಬಳಿ ಶಿರ್ಲಾಲು ಕಡೆಯಿಂದ ಬಂದ ಲಾರಿ ರಮೇಶ್ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮ ರಮೇಶ್ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ ಲಾರಿ ಬೈಕಿಗೆ ಡಿಕ್ಕಿಯಾದ ಬಳಿಕ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ .
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ