Share this news

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣ ಸಂಬAಧ ಶಿವಮೊಗ್ಗದ ರಾಗಿಗುಡ್ಡ ಶಾಂತಿನಗರ ಸಹಜ ಸ್ಥಿತಿಯತ್ತ ಮರಳುತ್ತಿದ್ದು, 144 ಸೆಕ್ಷನ್ ಮುಂದುವರಿದಿದೆ. ಹೀಗಾಗಿ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಪೊಲೀಸರು ಕಡಿವಾಣ ಹಾಕುತ್ತಿದ್ದಾರೆ.

ರಾಗಿಗುಡ್ಡದಲ್ಲಿ ಕಲ್ಲು ತೂರಾಟದ ಬಳಿಕ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದಾದ್ಯಂತ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ. ಆದರೆ ನಿಷೇಧಾಜ್ಞೆ ನಡುವೆಯೇ ಶಿವಮೊಗ್ಗ ನಗರದಲ್ಲಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನ ತೆರೆಯುತ್ತಿದ್ದು, ವ್ಯಾಪಕ ವಹಿವಾಟು ಆರಂಭಗೊAಡಿದೆ.ನಿನ್ನೆ ಶಿವಮೊಗ್ಗ ನಗರದ ಸಂಪೂರ್ಣ ಸ್ತಬ್ಧವಾಗಿದ್ದ ಅಮೀರ್ ಅಹ್ಮದ್ ಸರ್ಕಲ್ ಬಳಿಯ ಹೂವಿನ ಮಾರುಕಟ್ಟೆ ಇಂದು ಓಪನ್ ಆಗಿದೆ. 144 ಸೆಕ್ಷನ್ ತೆರವು ಮಾಡಿ ವ್ಯಾಪಾರ ವಹಿವಾಟಿಗೆ ಅನುಮತಿ ನೀಡುವಂತೆ ವರ್ತಕರು ಪಟ್ಟು ಹಿಡಿದಿದ್ದಾರೆ.

ಅಂಗಡಿ ಮುಂಗಟ್ಟು ಓಪನ್ ಮಾಡದಂತೆ ವ್ಯಾಪಾರಸ್ಥರಲ್ಲಿ ಮನವಿ ಮಾಡುತ್ತಿರುವ ಪೊಲೀಸರು, ಗುಂಪು ಸೇರದಂತೆ ಸಾರ್ವಜನಿಕರಿಗೆ ಸೂಚಿಸುತ್ತಿದ್ದಾರೆ. ನಿಷೇಧಾಜ್ಞೆ ಜಾರಿ ಹಿನ್ನಲೆ ಅಗತ್ಯ ವಸ್ತು ಖರೀದಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಅನಗತ್ಯ ಬೈಕ್ ಮತ್ತು ಜನರ ಓಡಾಟಕ್ಕೆ ಪೋಲಿಸರು ಕಡಿವಾಣ ಹಾಕುತ್ತಿದ್ದಾರೆ.

 

 

 

 

Leave a Reply

Your email address will not be published. Required fields are marked *