Share this news

ಕಾರ್ಕಳ : ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪತಿ ಕೌಶಿಕನನ್ನು ಮತ್ತು ಸಕಲ ಸೌಭಾಗ್ಯಗಳನ್ನು ತಿರಸ್ಕರಿಸಿ ಏಕಾಂಗಿಯಾಗಿ ಆಧ್ಯಾತ್ಮದ ಹಾದಿಯಲ್ಲಿ ನಡೆದ ಅಕ್ಕಮಹಾದೇವಿಯ ದಿಟ್ಟತನ ಎಲ್ಲರಿಗೂ ಪ್ರೇರಣಾದಾಯಿಯಾಗಿದೆ. ಅಲ್ಲಮಪ್ರಭುಗಳು ಹೇಳುವಂತೆ ಶಿವಶಕ್ತಿಯ ಸ್ತ್ರೀ ರೂಪವೇ ಆಗಿದ್ದ ಅಕ್ಕಮಹಾದೇವಿಯನ್ನು ಅನುಭವ ಮಂಟಪದಲ್ಲಿ ಪರೀಕ್ಷೆಗೆ ಒಡ್ಡಿ ಆಕೆಯ ವ್ಯಕ್ತಿತ್ವ, ಅಸ್ತಿತ್ವವನ್ನು ಅಲ್ಲಮಪ್ರಭುಗಳು ಜಗತ್ತಿಗೆ ಪರಿಚಯಿಸಿದರು ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ಜ್ಯೋತಿ ರೈ ಹೇಳಿದರು.
ಅವರುವಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇವುಗಳ ಸಹಯೋಗದೊಂದಿಗೆ ಕಾರ್ಕಳ ಸರಕಾರಿ.ಪ.ಪೂ.ಕಾಲೇಜಿನಲ್ಲಿ ನ.25ರಂದು ನಡೆದ ತಿಂಗಳ ‘ಅರಿವು ತಿಳಿವು’ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಅಕ್ಕಮಹಾದೇವಿಯ ವಚನಗಳು : ಒಂದು ಪ್ರವೇಶ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಲೌಕಿಕ ಪುರುಷನನ್ನು ತಿರಸ್ಕರಿಸಿ ಅಲೌಕಿಕ ಪುರುಷ ಚೆನ್ನಮಲ್ಲಿಕಾರ್ಜುನನ್ನೇ ತನ್ನ ಪತಿಯೆಂದು ಭಾವಿಸಿ ಅರಿಷಡ್ವರ್ಗಗಳನ್ನು ತೊರೆದು ಮಾನಸಿಕವಾಗಿಯೂ ಬೆತ್ತಲಾಗಿ ಶ್ರೇಷ್ಠ ವಚನಗಳನ್ನೂ ನೀಡಿದ ಆಕೆಯಲ್ಲಿ ದೈಹಿಕ ಭಾವವನ್ನು ಮೀರಿದ ಅಕ್ಕಮಹಾದೇವಿಯನ್ನು ಕಾಣಬಹುದಾಗಿದೆ. ಅಕ್ಕನ ವಚನಗಳಲ್ಲಿ ಮುಗ್ದತೆಯಿದೆ, ಸತಿಪತಿ ಭಾವವಿದೆ, ಸ್ವಾಭಿಮಾನದ ಕೆಚ್ಚಿದೆ, ಪ್ರತಿಭಟನೆಯ ಸ್ವರವೂ ಇದೆ ಎಂಬುದಾಗಿ ಸೋದಾಹರಣವಾಗಿ ವಿವರಿಸಿದರು.
ಅಲ ಅ.ಭಾ.ಸಾ.ಪ.ದ ತಾಲೂಕು ಘಟಕದ ಗೌರವಾಧ್ಯಕ್ಷ ನಿತ್ಯಾನಂದ ಪೈ ಉಪಾಧ್ಯಕ್ಷ ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಧಾಕರ ಶ್ಯಾನುಭಾಗ್ ಪ್ರಾರ್ಥಿಸಿದರು. ವೀಣಾ ರಾಜೇಶ್ ಅತಿಥಿಗಳನ್ನು ಪರಿಚಯಿಸಿದರು. ಗಂಗಾಧರ ಪಣಿಯೂರು ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಸುಲೋಚನಾ ಬಿ.ವಿ. ವಂದಿಸಿದರು.

Leave a Reply

Your email address will not be published. Required fields are marked *