ಬೆಂಗಳೂರು: ಮುಂದಿನ ತಿಂಗಳು ಮೇ 10ರಂದು ಕರ್ನಾಟಕ ವಿಧಾಸನಸಭೆ ಚುನಾವಣೆ ಮತದಾನ ನಡೆಯಲಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಪ್ರಚಾರ ಕಾವೇರಿದೆ. ಕಾಂಗ್ರೆಸ್ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇನ್ನೇನು ಕೆಲವೆ ದಿನಗಳಲ್ಲಿ 2ನೇ ಪಟ್ಟಿ ಬಿಡುಗಡೆ ಮಾಡಲಿದೆ.
ಈ ನಿಟ್ಟಿನಲ್ಲಿ ಗುರುವಾರ (ಮಾ.30) ರಂದು ಬೆಂಗಳೂರಿನ ಹೊರವಲಯದಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿದ್ದು, ಸಭೆಯಲ್ಲಿ ಟಿಕೆಟ್ ಅಂತಿಮಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ರಾಜ್ಯ ಕಾಂಗ್ರೆಸ್ 52 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಗೊಳಿಸಿ ಹೈಕಮಾಂಡ್ಗೆ ಕಳುಹಿಸಿದೆ.
48 ವಿಧಾನಸಭಾ ಕ್ಷೇತ್ರಗಳಿಗೆ ಸ್ಕ್ರೀನಿಂಗ್ ಕಮಿಟಿ ಇಬ್ಬರು ಹೆಸರುಗಳನ್ನು ಅಂತಿಮಗೊಳಿಸಿದೆ. ಒಬ್ಬರ ಹೆಸರನ್ನೇ ಅಂತಿಮಗೊಳಿಸಿ, ಪಟ್ಟಿ ಕಳುಹಿಸುವಂತೆ ಹೈಕಮಾಂಡ್, ರಾಜ್ಯ ನಾಯಕರಿಗೆ ಸೂಚನೆ ನೀಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. 52 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಏಪ್ರಿಲ್ 4 ರಂದು ಅಂತಿಮಗೊಳಿಸುತ್ತದೆ ಎನ್ನಲಾಗಿದೆ.
ಈ ಎಲ್ಲದರ ನಡುವೆ ಅಂತಿಮವಾಗಿ ಯಾರಿಗೆ ಗೆಲ್ಲಿ ಟಿಕೆಟ್ ಸಿಗುತ್ತದೆ ಎನ್ನುವುದೇ ತೀವ್ರ ಕುತೂಹಲ ಕೆರಳಿಸಿದೆ.