ವರದಿ: ಕರಾವಳಿನ್ಯೂಸ್ ಡೆಸ್ಕ್
ಬಿರು ಬಿಸಿಲ ಬೇಗೆ ಮುಗಿದು ಮಳೆಗಾಲ ಆರಂಭವಾಗಿದ್ದು ಜನರಲ್ಲಿ ಸಂತಸ ಮೂಡಿಸಿದೆ. ಆದರೆ ಮಳೆಯ ಬೆನ್ನಲ್ಲೇ ಇದೀಗ ಮಲೇರಿಯಾ,ಡೆಂಘಿ, ಇಲಿಜ್ವರದಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸಾಮಾನ್ಯವಾಗಿ ಮಳೆಗಾಲದ ಆರಂಭದಲ್ಲಿ ಮನೆಯ ಸುತ್ತಮುತ್ತ ಶೇಖರಣೆಯಾದ ಕೊಳಚೆ ನೀರಿನಿಂದ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಇಂತಹ ಸಂದರ್ಭದಲ್ಲಿ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಅತ್ಯಂತ ಸವಾಲಿನ ಸಂಗತಿಯಾಗಿದೆ.
ಸಾಮಾನ್ಯವಾಗಿ ಏಪ್ರಿಲ್ ಮೇ ತಿಂಗಳಿನಿAದ ಒಂದೆರಡು ಮಳೆಗೆ ಕಂಡುಬರುವ ಮಲೇರಿಯಾ, ಡೆಂಘಿ ಪ್ರಕರಣಗಳು ಸಂಪೂರ್ಣ ಮಳೆಗಾಲದ ಆರಂಭದವರೆಗೂ ಕಂಡುಬರುತ್ತವೆ. ಆದರೆ ಈ ಬಾರಿ ಮಳೆಯಿಲ್ಲದೇ ಒಣಹವೆ ಇದ್ದ ಹಿನ್ನಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿ ಕಳೆದ ಜನವರಿಯಿಂದ ಮೇ ತಿಂಗಳವರೆಗೆ ಕೇವಲ ೭ ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಪ್ರಸಕ್ತ ವರ್ಷದಲ್ಲಿ ಜೂನ್ ತಿಂಗಳಿನಿAದ ಮಳೆಯಾಗುತ್ತಿದ್ದು ಮಲೇರಿಯಾ,ಡೆಂಘಿ ಜ್ವರದ ಪ್ರಕರಣಗಳು ಕೂಡ ಕಂಡುಬರುವ ಸಾಧ್ಯತೆಗಳು ದಟ್ಟವಾಗಿವೆ. ಪ್ರಮುಖವಾಗಿ ಮನೆಯ ಸುತ್ತಮುತ್ತ ವಾಹನಗಳ ಟಯರ್, ತೆಂಗಿನ ಗೆರಟೆ,ತೆರೆದ ಕೊಳಚೆ ಗುಂಡಿ ಹಾಗೂ ಅಡಿಕೆ ತೋಟಗಳಲ್ಲಿನ ಅಡಿಕೆ ಹಾಳೆಗಳಲ್ಲಿ ನೀರು ಶೇಖರಣೆಯಾದರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ, ಆದ್ದರಿಂದ ಮನೆ ಹಾಗೂ ತೋಟದಲ್ಲಿ ಕೊಳಚೆ ನೀರು ನಿಲ್ಲದಂತೆ ಮುನ್ನೆಚರಿಕೆ ವಹಿಸಬೇಕು.
ಇದಲ್ಲದೇ ಮುಖ್ಯವಾಗಿ ರಬ್ಬರ್ ತೋಟಗಳಲ್ಲಿ ರಬ್ಬರ್ ಹಾಲು ಶೇಖರಣೆ ಮಾಡುವ ತಟ್ಟೆಗಳಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿಯಾಗುತ್ತಿದ್ದು ಇದರಿಂದಲೂ ಕೂಡ ಡೆಂಘಿ, ಮಲೇರಿಯಾ ಖಾಯಿಲೆ ಹರಡುತ್ತದೆ. ಆದ್ದರಿಂದ ಮಳೆಗಾಲ ಆರಂಭದಲ್ಲಿ ತೋಟದಲ್ಲಿ ಸ್ವಚ್ಚತೆ ಕಾಪಾಡಬೇಕು. ಅಲ್ಲದೇ ಮನೆಯಲ್ಲಿ ಮುಖ್ಯವಾಗಿ ಸೊಳ್ಳೆ ಪರದೆಗಳನ್ನು ಬಳಸುವುದು ಉತ್ತಮ, ಇದರ ಜತೆಗೆ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಹಾಗೂ ಸ್ವಚ್ಚತೆಯ ಕುರಿತು ಜಾಗೃತೆ ವಹಿಸಿದರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ.
ಸಾಮಾನ್ಯ ಜ್ವರ,ಶೀತ, ತಲೆನೋವು, ಮೈಕೈನೋವಿನ ಲಕ್ಷ÷ಣ ಕಂಡುಬAದರೆ ನಿರ್ಲಕ್ಷö್ಯ ಬೇಡ:
ಮಳೆಗಾಲ ಆರಂಭದಲ್ಲಿ ಸಾಮಾನ್ಯವಾಗಿ ಜ್ವರ, ತಲೆನೋವು, ಮೈಕೈ ನೋವು ಕಂಡುಬAದರೆ ಯಾವತ್ತೂ ನಿರ್ಲಕ್ಷö್ಯ ಮಾಡಬೇಡಿ,ಯಾಕೆಂದರೆ ೪/೫ ದಿನಗಳಿಂದ ಇಂತಹ ಲಕ್ಷಣಗಳು ಕಾಣಿಸಿಕೊಂಡಲ್ಲಿ ಏಕಾಎಕಿ ನಿಮ್ಮ ದೇಹದ ರಕ್ತದಲ್ಲಿನ ಬಿಳಿರಕ್ತ ಕಣ ಹಾಗೂ ಪ್ಲೇಟ್ಲೇಟ್ ಗಳು ಕಡಿಮೆಯಾಗಿ ಆರೋಗ್ಯ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಮಳೆಗಾಲದಲ್ಲಿ ಕಂಡುಬರುವ ಜ್ವರದಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ನಿರ್ಲಕ್ಷö್ಯ ಮಾಡದೇ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಜತೆಗೆ ಮಳೆಗಾಲದಲ್ಲಿ ಕುದಿಸಿದ ನೀರನ್ನು ಕುಡಿಯುವುದು ಉತ್ತಮ. ಸ್ವಚ್ಚತೆ ಹಾಗೂ ಜಾಗೃತಿ ವಹಿಸಿದರೆ ಖಂಡಿತವಾಗಿಯೂ ಇಂತಹ ಸಾಂಕ್ರಾಮಿಕ ಖಾಯಿಲೆಗಳಿಂದ ದೂರವಿರಬಹುದಾಗಿದೆ.
ಸ್ವಚ್ಚತೆ ಹಾಗೂ ಆರೋಗ್ಯದ ಕಾಳಜಿಯಿಂದ ಸಾಂಕ್ರಾಮಿಕ ಖಾಯಿಲೆ ತಡೆಗಟ್ಟಬಹುದು: ಡಾ.ಕೃಷ್ಣಾನಂದ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ
ಮಳೆಗಾಲದ ಆರಂಭದಲ್ಲಿ ಮಲೇರಿಯಾ, ಡೆಂಘಿ ಜ್ವರ ಕಂಡುಬರುತ್ತದೆ.ಮನೆಯ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಹಾಗೂ ತೋಟದ ಕೆಲಸದ ಸಂದರ್ಭದಲ್ಲಿ ಮೈತುಂಬಾ ಬಟ್ಟೆ ಧರಿಸಬೇಕು ಹಾಗೂ ಓಡೊಮೋಸ್ ನಂತಹ ಕ್ರಿಮ್ ಹಚ್ಚಿಕೊಳ್ಳಬೇಕು ಇದರ ಜತೆಗೆ ಜ್ವರದ ಲಕ್ಷಣಗಳನ್ನು ಕಂಡುಬAದಲ್ಲಿ ನಿರ್ಲಕ್ಷö್ಯ ಮಾಡದೇ ವೈದ್ಯರಿಂದ ತಪಾಸಣೆ ಮಾಡಿಕೊಳ್ಳಬೇಕೆಂದು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಹೇಳಿದ್ದಾರೆ.