ಗದಗ: ಶ್ರೀರಾಮ ಸೇನೆ, ವಿಹೆಚ್ ಪಿ, ಬಜರಂಗದಳದAತಹ ಹಿಂದೂ ಸಂಘಟನೆಗಳು ಎಂದಿಗೂ ಸಮಾಜದ ಶಾಂತಿ ಕದಡುವ ಕೆಲಸವಾಗಲಿ, ಕಾನೂನುಬಾಹಿರ ಕೆಲಸವಾಗಲಿ ಮಾಡಿಲ್ಲ, ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆಯಿದ್ದರೆ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಅವರು ಭಾನುವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಭಯೋತ್ಪಾದಕ ಸಂಘಟನೆಗಳ ಜತೆ ಕೈಜೋಡಿಸುವ ಮೂಲಕ ದೇಶದ್ರೋಹದ ಕೆಲಸ ಮಾಡಿರುವ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಪ್ರಸ್ತುತ ರಾಜ್ಯದಲ್ಲಿ ಗೋಹತ್ಯೆ ನಿಷೇಧವಿದ್ದರೂ ರಾಜಾರೋಷವಾಗಿ ಕಸಾಯಿಖಾನೆಗೆ ಗೋವುಗಳು ಹೋಗುತ್ತಿವೆ. ಇದನ್ನು ನಿಲ್ಲಿಸದಿದ್ದರೇ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.