ನವದೆಹಲಿ: ಐದನೇ ಬಾರಿ ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್ ಅವರು ಇಂದು ಸಂಸತ್ ಭವನದಲ್ಲಿ 2023-2024 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದರು.
ಬಜೆಟ್ ಮಂಡನೆಗೂ ಮುನ್ನ ಮಾತನಾಡಿದ ಅವರು ಅಮೃತ ಕಾಲದ ಮೊದಲ ಬಜೆಟ್ ಇದಾಗಿದ್ದು, ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ ಮತ್ತು ಉಜ್ವಲ ಭವಿಷ್ಯದತ್ತ ಸಾಗುತ್ತಿದೆ. ಮಹಿಳೆಯರು, ಯುವಕರು, ಒಬಿಸಿ ದಲಿತರಿಗೆ ಮನ್ನಣೆ ನೀಡುವುದು ನಮಗೆ ಬಹಳ ಮುಖ್ಯುವಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, 28 ತಿಂಗಳವರೆಗೆ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಪೂರೈಸುವ ಯೋಜನೆಯೊಂದಿಗೆ ಯಾರೂ ಹಸಿವಿನಿಂದ ಮಲಗದಂತೆ ನಾವು ಖಚಿತಪಡಿಸಿದ್ದೇವೆ ಎಂದರು. ಇದೇ ವೇಳೆ ಅವರು ಗರೀಬ್ ಕಲ್ಯಾಣ ಯೋಜನೆ ಮುಂದಿನ ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದರು.
2014 ರಿಂದ ಭಾರತದಾದ್ಯಂತ 157 ಹೊಸ ನರ್ಸಿಂಗ್ ಕಾಲೇಜು ಆರಂಭವಾಗಿದೆ. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು ಹಾಗೂ ಭದ್ರ ಮೇಲ್ಡಂಡೆ ಯೋಜನೆಗೆ 5630 ರೂಕೋಟಿ ಹಣವನ್ನು ಮೀಸಲಿಡುವುದಾಗಿ ಘೋಷಣೆ ಮಾಡಿದರು.
ಈ ಬಾರಿಯ ಬಜೆಟ್‌ನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕೇಂದ್ರ ಸರ್ಕಾರ 80 ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ ಆಹಾರವಸ್ತುಗಳ ವಿತರಣೆಯ ಯೋಜನೆ ಇನ್ನೂ ಎರಡು ವರ್ಷ ಮುಂದುವರಿಯಲಿದೆ ಎಂದು ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಅಗ್ಗದ ಬೆಲೆಯಲ್ಲಿ ಅಕ್ಕಿ, ಗೋಧಿ, ಸಕ್ಕರೆ ಇತ್ಯಾದಿ ಅಗತ್ಯ ಆಹಾರವಸ್ತುಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ. ಕೋವಿಡ್ ವೇಳೆ ಈ ಉಚಿತ ಆಹಾರಧಾನ್ಯ ವಿತರಣೆ ಕೋಟ್ಯಂತರ ಜನರಿಗೆ ಅನುಕೂಲವಾಗಿತ್ತು. ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡಲು ಸರ್ಕಾರ ಅಗ್ರಿಕಲ್ಚರ್ ಆಕ್ಸಲರೇಟರ್ ಫಂಡ್ ಅನ್ನು ಸ್ಥಾಪಿಸಿದೆ. ಇದರಿಂದ ಕೃಷಿ ಕ್ಷೇತ್ರದ ಸರಬರಾಜು ಸರಪಳಿ ಮತ್ತು ಜಾಲಕ್ಕೆ ಬಲ ಸಿಗುವ ನಿರೀಕ್ಷೆಯಿದೆ. ಉಜ್ವಲ ಯೋಜನೆಯಡಿ 6 ಕೋಟಿ ಜನರಿಗೆ ಸಂಪರ್ಕ, ಆರ್ಥಿಕತೆಯು ಹೆಚ್ಚು ಔಪಚಾರಿಕವಾಗಿದೆ. ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು, ಶ್ರೀ ಅನ್ನ ಜೋಳ, ಶ್ರೀ ಅನ್ನ ರಾಗಿ, ಸಜ್ಜೆ ಸಿರಿಧಾನ್ಯಗಳ ಯೋಜನೆ ಜಾರಿ, ಹಸಿರು ಕ್ರಾಂತಿ ಸರ್ವರನ್ನು ಒಳಗೊಂಡ ಅಭಿವೃದ್ಧಿ, ಮಹಿಳೆಯರ ಆರ್ಥಿಕ ಸಬಲೀಕರಣ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.
ಈ ಬಜೆಟ್ ನಲ್ಲಿ ಸಪ್ತ ಸೂತ್ರಗಳನ್ನು ಅಳವಡಿಸಲಾಗಿದೆ. ರೈತರು, ಪರಿಶಿಷ್ಟ ಜಾತಿಯ ಮಹಿಳೆಯರಿಂದ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಿದೆ. ವಿಶೇಷವಾಗಿ, ಜಮ್ಮು ಮತ್ತು ಕಾಶ್ಮೀರ ಲಡಾಖ್ಗೆ ಒತ್ತು ನೀಡಲಾಗಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ರಚಿಸಲಾಗುವುದು. ಸ್ಟಾರ್ಟ್ ಅಪ್ ಗಳ ಬೆಳವಣಿಗೆಗೆ ಅಂತರ್ಗತ ಪರಿಹಾರ ಇರುತ್ತದೆ. ಕೃಷಿ-ಸ್ಟಾರ್ಟ್ ಅಪ್ ಗಳನ್ನು ತೆರೆಯಲು ಅವರನ್ನು ಪ್ರೋತ್ಸಾಹಿಸಲು ಕೃಷಿ ವರ್ಧನೆ ನಿಧಿಯನ್ನು ನೀಡಲಾಗುವುದು. ನಾವು ವಿಶ್ವದಲ್ಲೇ ಅತಿ ದೊಡ್ಡ ಆಹಾರ ಧಾನ್ಯಗಳ ಉತ್ಪಾದಕರು ಮತ್ತು ಎರಡನೇ ಅತಿದೊಡ್ಡ ರಫ್ತುದಾರರಾಗಿದ್ದೇವೆ ಎಂದರು.
ಕೃಷಿಗೆ ಸಂಬAಧಿಸಿದ ಸ್ಟಾರ್ಟ್ ಅಪ್ ಗಳಿಗೆ ಆದ್ಯತೆ ನೀಡಲಾಗುವುದು. ಯುವ ಉದ್ಯಮಿಗಳು ಕೃಷಿ-ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಬೇಕು. ಭದ್ರಾ ಮೇಲ್ದೆಂಡೆ ಯೋಜನೆಗೆ 5,630 ಕೋಟಿ ರೂ. ಘೋಷಣೆ ಮಾಡಲಾಗಿದೆ. ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂ. ಮೀಸಲಿಡಲಾಗುವುದು. ಜಿಡಿಪಿಯ ಶೇ. 3.3 ರಷ್ಟು ಉದ್ಯೋಗ ಸೃಷ್ಟಿಗೆ ಮೀಸಲಿಡಲಾಗುವುದು.
ಮಕ್ಕಳು ಮತ್ತು ಯುವಜನರಿಗಾಗಿ ಡಿಜಿಟಲ್ ಲೈಬ್ರರಿಗಳು ಸಿದ್ಧಪಡಿಸಲಾಗುತ್ತಿದೆ. ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ಪಂಚಾಯತ್ ಮತ್ತು ವಾರ್ಡ್ ಮಟ್ಟಕ್ಕೆ ತೆರೆಯಲಾಗುವುದು. ಪ್ರಾದೇಶಿಕ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪುಸ್ತಕಗಳು ಲಭ್ಯವಿರುತ್ತವೆ. ವಯಸ್ಸಿಗೆ ಅನುಗುಣವಾಗಿ ಪುಸ್ತಕಗಳು ಲಭ್ಯವಿರುತ್ತವೆ. ರಾಜ್ಯಗಳು ಮತ್ತು ಅವುಗಳಿಗಾಗಿ ನೇರ ಗ್ರಂಥಾಲಯಗಳನ್ನು ಪ್ರೋತ್ಸಾಹಿಸಲಾಗುವುದು. ರೈಲ್ವೆಗೆ 2.4 ಲಕ್ಷ ಕೋಟಿ ರೂ. ಪರಿಶಿಷ್ಟ ಪಂಗಡಕ್ಕೆ 15,000 ಕೋಟಿ ರೂ. ಪಿಎಂ ಆವಾಸ್ ಯೋಜನೆಗೆ ಹಂಚಿಕೆಯು 66% ರಷ್ಟು ಹೆಚ್ಚಾಗುತ್ತದೆ. ಪಿಎಂ ವಸತಿ ಯೋಜನೆಗೆ 79 ಸಾವಿರ ಕೋಟಿ ರೂ. ಕರ್ನಾಟಕದ ಬರ ನಿರ್ವಹಣೆಗೆ 5,300 ಕೋಟಿ ರೂ. ಬಂಡವಾಳ ಹೂಡಿಕೆ 10 ಲಕ್ಷ ಕೋಟಿ ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೃಷಿ, ಆರೋಗ್ಯ ಮತ್ತು ಸುಸ್ಥಿರ ನಗರಗಳ ಕ್ಷೇತ್ರಗಳಲ್ಲಿ ಅಂತರ-ಶಿಸ್ತಿನ ಸಂಶೋಧನೆ, ಅತ್ಯಾಧುನಿಕ ಅಪ್ಲಿಕೇಶನ್ಗಳು ಮತ್ತು ಸ್ಕೇಲೆಬಲ್ ಸಮಸ್ಯೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಉದ್ಯಮ ಪಾಲುದಾರರು ಪಾಲುದಾರರಾಗಲಿದ್ದಾರೆ.ಮೇಕ್ ಇನ್ ಇಂಡಿಯಾ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮತ್ತು ಭಾರತಕ್ಕಾಗಿ ಕೃತಕ ಬುದ್ಧಿಮತ್ತೆಯ ಕೆಲಸವನ್ನು ಮಾಡಲು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆಗಾಗಿ 3 ಉತ್ಕೃಷ್ಟ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮುಂದಿನ 3 ವರ್ಷಗಳಲ್ಲಿ, ಒಂದು ಕೋಟಿ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲು ನೆರವು ಪಡೆಯುತ್ತಾರೆ. 10,000 ಜೈವಿಕ ಇನ್ಪುಟ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಆರಂಭಿಸಲಿದೆ. ಇಂಧನ ಪರಿವರ್ತನೆಗೆ 35,000 ಕೋಟಿ ರೂ.ಗಳ ಆದ್ಯತೆಯ ಬಂಡವಾಳ; ಕಾರ್ಯಸಾಧ್ಯತೆ ಅಂತರ ಧನಸಹಾಯ ಪಡೆಯಲು ಬ್ಯಾಟರಿ ಸಂಗ್ರಹಣೆ
ನ್ಯಾಯದ ದಕ್ಷ ಆಡಳಿತಕ್ಕಾಗಿ, ಇಕೋರ್ಟ್ ಯೋಜನೆಯ 3 ನೇ ಹಂತವನ್ನು 7000 ಕೋಟಿ ರೂ.ಗಳ ವೆಚ್ಚದೊಂದಿಗೆ ಪ್ರಾರಂಭಿಸಲಾಗುವುದು. ಒಂದು ಜಿಲ್ಲೆ, ಒಂದು ಉತ್ಪನ್ನ ಮತ್ತು ಜಿಐ ಉತ್ಪನ್ನಗಳು ಮತ್ತು ಇತರ ಕರಕುಶಲ ವಸ್ತುಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ರಾಜ್ಯ ರಾಜಧಾನಿ ಅಥವಾ ರಾಜ್ಯದ ಅತ್ಯಂತ ಜನಪ್ರಿಯ ಪ್ರವಾಸಿ ತಾಣದಲ್ಲಿ ಯುನಿಟಿ ಮಾಲ್ ಸ್ಥಾಪಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುವುದು. ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕಾಗಿ ಸಂಪೂರ್ಣ ಪ್ಯಾಕೇಜ್ ಆಗಿ ಅಭಿವೃದ್ಧಿಪಡಿಸಲು ಪ್ರವಾಸಿ ತಾಣಗಳನ್ನು ಚಾಲೆಂಜ್ ಮೋಡ್ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇದೇ ವೇಳೆ ಅವರು ಹಿರಿಯ ನಾಗರಿಕರಿಗೆ ಗರಿಷ್ಠ ಠೇವಣಿ ಯೋಜನೆ 15 ಲಕ್ಷದಿಂದ 30 ಲಕ್ಷ ರೂ. ಗೆ ಹೆಚ್ಚಳ ಮಾಡಲಾಗಿದೆ. ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಲಾಗಿದೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಹೊಸ ಉಪ ಯೋಜನೆಯನ್ನು ಪ್ರಾರಂಭಿಸಲಾಗುವುದು, ಗುರಿಯ ಹೂಡಿಕೆ 6000 ಕೋಟಿ ರೂ. ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದರು.