ಮುಲ್ಕಿ: ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲ 10ನೇ ತೋಕೂರು ಹಾಗೂ ಹೆಲ್ಪಿಂಗ್ ಹ್ಯಾಂಡ್ಸ್ ವಾಟ್ಸಾಪ್ ಗೆಳೆಯರ ಬಳಗ ವತಿಯಿಂದ ಸಹಾಯಧನ ಹಸ್ತಾಂತರ ಕಾರ್ಯಕ್ರಮ ಭಾನುವಾರ ನಡೆಯಿತು.
ಮುಲ್ಕಿ- ಮೂಡಬಿದ್ರಿ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಕೊರೋನ ಸೋಂಕಿನಿAದ ಮೃತಪಟ್ಟ ತೋಕೂರು ಸುಬ್ರಹ್ಮಣ್ಯನಗರ ಗ್ರಾಮದ ದಿವಂಗತ ಬಿ.ಕೆ. ಅಹಮ್ಮದ್ ಕುಟುಂಬಕ್ಕೆ ಮನೆ ಕಟ್ಟಲು ಸಂಗ್ರಹಿಸಿರುವ ಆರ್ಥಿಕ ಸಹಾಯಧನವನ್ನು ಹಸ್ತಾಂತರಿಸಿ ಮಾತನಾಡಿ, ಯುವ ಸಂಘಟನೆಗಳು ಸಮಾಜದಲ್ಲಿನ ಬಡ ಜನತೆಯ ಕಷ್ಟಗಳಿಗೆ ಸ್ಪಂದಿಸುವAತಾಗಬೇಕು, ಆ ನಿಟ್ಟಿನಲ್ಲಿ ಯುವ ಸಂಘಟನೆಯ ಈ ಕಾರ್ಯಕ್ರಮವು ನಿಜಕ್ಕೂ ಶ್ಲಾಘನೀಯ ಎಂದರು.
ಪಡುಪಣAಬೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಫೇಮಸ್ ಯೂತ್ ಕ್ಲಬ್ಬಿನ ಸಮಾಜಮುಖಿ ಕೆಲಸಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯರಾದ ಜ್ಯೋತಿ ಮತ್ತು ಅನಿಲ್, ಸುಕೇಶ್ ಶಿರ್ತಾಡಿ, ತಾಲೂಕು ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ದಿವಾಕರ ಕರ್ಕೇರ, ಮೂಲ್ಕಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಿಶಾಂತ್ ಕಿಲೆಂಜೂರು, ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ಅಧ್ಯಕ್ಷರಾದ ಸುರೇಶ್ ಬಿ ದೇವಾಡಿಗ, ಬಿಲ್ಲವ ಸಂಘ ಹಳೆಯಂಗಡಿ ಗೌರವಾಧ್ಯಕ್ಷರಾದ ಗಣೇಶ್ ಜಿ ಬಂಗೇರ, ವಿಶ್ವಬ್ಯಾಂಕ್ ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ದಿನಕರ್ ಸಾಲ್ಯಾನ್, ಶ್ರೀ ಕೋರ್ದಬ್ಬು ದೈವಸ್ಥಾನ ತೋಕೂರು ಇದರ ಗುರಿಕಾರರಾದ ಗೋಪಾಲಕೃಷ್ಣ ಸಾಲ್ಯಾನ್, ಸಂಜೀವ ಕರ್ಕೆರ ಹಾಗೂ ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷರಾದ ಭಾಸ್ಕರ್ ಅಮೀನ್ ತೋಕೂರು ಮತ್ತು ಮಹಿಳಾ ಅಧ್ಯಕ್ಷರಾದ ಪ್ರೇಮಲತಾ ಯೋಗೀಶ್ ಮತ್ತು ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲದ ಸದಸ್ಯರು ಹಾಗೂ ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದರು.
ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷರಾದ ಭಾಸ್ಕರ್ ಅಮೀನ್ ಸ್ವಾಗತಿಸಿ ಪ್ರಸ್ತಾವನ್ಗೆöÊದರು. ಸಂಸ್ಥೆಯ ಸದಸ್ಯರಾದ ಸಂಪತ್ ಜೆ ಶೆಟ್ಟಿ ತೋಕೂರು ಗುತ್ತು ಕಾರ್ಯಕ್ರಮನಿರೂಪಿಸಿದರು.