ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ 5 ಗ್ಯಾರಂಟಿಗಳ ಜಾರಿಗೆ ರಾಜ್ಯದೆಲ್ಲೆಡೆ ಜನರ ಗದ್ದಲ ಶುರುವಾಗಿದ್ದ ಬೆನ್ನಲ್ಲೇ ವಿಪಕ್ಷಗಳು ಗ್ಯಾರಂಟಿಗಳ ಜಾರಿಗೆ ಸರ್ಕಾರದ ಮೇಲೆ ಮುಗಿಬಿದ್ದ ಪರಿಣಾಮ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿತ್ತು. ಇದೀಗ ಕೊನೆಗೂ ರಾಜ್ಯ ಸರ್ಕಾರ ಎಲ್ಲಾ 5 ಗ್ಯಾರಂಟಿಗಳನ್ನು ಏಕಕಾಲದಲ್ಲಿ ಜಾರಿಗೊಳಿಸುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಜತೆ ಜಂಟೀಸುದ್ದಿಗೋಷ್ಠಿ ನಡೆಸಿ ಗ್ಯಾರಂಟಿಗಳ ಕುರಿತು ಮಾನದಂಡ ಹಾಗೂ ಅನುಷ್ಠಾನಗಳ ಕುರಿತು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ಎನ್ನುವ ಘೋಷಣೆಯಲ್ಲಿ ಸರ್ಕಾರ ಮಾರ್ಪಾಡು ಮಾಡಿದ್ದು ಇದೀಗ ಬಳಕೆದಾರರು ಒಂದು ವರ್ಷದಲ್ಲಿ ಬಳಸಿದ ಒಟ್ಟು ಸರಾಸರಿ ವಿದ್ಯುತ್ ಬಳಕೆಯ ಲೆಕ್ಕಾಚಾರದ ಆಧಾರದಲ್ಲಿ ಅದಕ್ಕೆ ಹೆಚ್ಚುವರಿಯಾಗಿ ಶೇ 10 ರಷ್ಟು ಉಚಿತ ವಿದ್ಯುತ್ ಬಳಕೆಗೆ ಅವಕಾಶವಿದೆ ಎಂದು ಸಿಎಂ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಗೃಹಜ್ಯೋತಿ ಯೋಜನೆ ಮುಂದಿನ ಜುಲೈ 1ರಿಂದಲೇ ಜಾರಿಗೆ ಬರಲಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ ಮಾಸಿಕ ತಲಾ 2 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಈ ಯೋಜನೆಯನ್ನು ಸ್ವಾತಂತ್ರö್ಯ ದಿನಾಚರಣೆಯ ದಿನ ಆಗಸ್ಟ್ 15ಕ್ಕೆ ಕಾರ್ಯಕ್ರಮ ಆಯೋಜಿಸಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದರು. ಈ ಯೋಜನೆಯು ಬಿಪಿಎಲ್ ಹಾಗೂ ಎಪಿಲ್ ಪಡಿತರ ಚೀಟಿದಾರರಿಗೂ ಅನ್ವಯವಾಗಲಿದ್ದು ಈ ಯೋಜನೆಗೆ ಜೂನ್ 15ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಬಳಿಕ ಜುಲೈ 15ರಿಂದ ಆಗಸ್ಟ್ 15ರವರೆಗೆ ಅರ್ಜಿಗಳನ್ನು ಪರಿಶೀಲಿಸಿ ಮನೆಯ ಯಜಮಾನಿಯ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದರು. ಇದರ ಜತೆಗೆ ಮನೆಯ ಯಜಮಾನಿ ವಿಕಲಚೇತನ ಅಥವಾ ವಿಧವಾ ವೇತನ,ವೃದ್ದಾಪ್ಯ ಪಿಂಚಣಿ ಪಡೆಯುತ್ತಿದ್ದರೂ ಅವರಿಗೆ ಹೆಚ್ಚುವರಿಯಾಗಿ ಗೃಹಲಕ್ಷ್ಮೀ ಯೋಜನೆಯ ಲಾಭ ಸಿಗಲಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆಜಿ ಅಕ್ಕಿ ವಿತರಣೆಯ ಘೋಷಣೆ ಮಾಡಲಾಗಿತ್ತು ಆದರೆ ಅಕ್ಕಿ ದಾಸ್ತಾನು ಕೊರತೆಯ ಹಿನ್ನಲೆಯಲ್ಲಿ ತಲಾ 10 ಕೆಜಿ ದವಸಧಾನ್ಯವನ್ನು ಮುಂದಿನ ತಿಂಗಳಿನಿAದ ಆರಂಭಿಸಲಾಗುವುದು. ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ ಮುಂದಿನ ಜುಲೈ 1ರಿಂದ 10 ಕೆಜಿ ದವಸಧ್ಯಾನ ವಿತರಿಸಲಾಗುವುದುಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಶಕ್ತಿ ಯೋಜನೆಯ ಕುರಿತು ಮಾಹಿತಿ ನೀಡಿದ ಸಿಎಂ, ರಾಜ್ಯದ ಎಲ್ಲಾ ಮಹಿಳೆಯರಿಗೂ ( ವಿದ್ಯಾರ್ಥಿನಿಯರೂ ಸೇರಿ) ಜೂನ್ 11ರಿಂದ ಈ ಯೋಜನೆ ಅನುಷ್ಟಾನಕ್ಕೆ ಬರಲಿದ್ದು,ಕರ್ನಾಟಕ ರಾಜ್ಯದೊಳಗಡೆ ಎಸಿ,ಸ್ಲೀಪರ್ ಕೋಚ್ ಹಾಗೂ ಲಕ್ಸುರಿ ಬಸ್ಸುಗಳನ್ನು ಹೊರತುಪಡಿಸಿ ಉಳಿದಂತೆ ಬೆಂಗಳೂರಿನ ರಾಜಹಂಸ, ಬಿಎಂಟಿಸಿ ಸೇರಿದಂತೆ ರಾಜ್ಯದ ಎಲ್ಲಾ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.ಇದರ ಜತೆಗೆ ಮಂಗಳಮುಖಿಯರಿಗೂ ಈ ಸೌಲಭ್ಯ ಸಿಗಲಿದೆ.
ಯುವನಿಧಿ ಯೋಜನೆಯಡಿ 2022-23ರಲ್ಲಿ ಪದವಿ,ಸ್ನಾತಕೋತ್ತರ ಪದವಿ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಪಡೆದು 2 ವರ್ಷದವರೆಗೆ ಉದ್ಯೋಗವಿಲ್ಲದೇ ಮನೆಯಲ್ಲಿದ್ದರೆ ಅಂತಹವರಿಗೆ ಪ್ರತೀ ತಿಂAಗಳು 2000 ಸಾವಿರ, ಡಿಪ್ಲೋಮಾ ಕೋರ್ಸ್ ಮಾಡಿ ಉದ್ಯೋಗ ಸಿಗದಿದ್ದರೆ ತಲಾ 1500 ರೂ ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದರು.ಈ ಯೋಜನೆಯಡಿ ಗರಿಷ್ಠ 2 ವರ್ಷದವರೆಗೆ ನಿರುದ್ಯೋಗ ಭತ್ಯೆ ಪಡೆಯಲು ಅವಕಾಶವಿದೆ.ಆದರೆ ಈ ನಡುವೆ ಉದ್ಯೋಗ ಸಿಕ್ಕಲ್ಲಿ ಅಂತಹವರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ ಎಂದರು