ಮುಲ್ಕಿ: ಬೀಚ್ ಅಭಿವೃದ್ಧಿ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಎಂದು ರಾಜ್ಯ ಬಂದರು ಹಾಗೂ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಹೇಳಿದರು.
ಅವರು ಅಂತರಾಷ್ಟ್ರೀಯ ಸರ್ಫಿಂಗ್ ಖ್ಯಾತಿಯ ಸಸಿಹಿತ್ಲು ಮುಂಡಾ ಬೀಚ್ ಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೀಚ್ ಅಭಿವೃದ್ಧಿಪಡಿಸಿ ಆ ಮೂಲಕ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಮೀನುಗಾರರು ಹಾಗೂ ಪಂಚಾಯತ್ ಸದಸ್ಯರಾದ ಚಂದ್ರಕುಮಾರ್ gಸ್ಥಳೀಯರ ಬೇಡಿಕೆಯಾದ ಮೀನುಗಾರಿಕಾ ಜಟ್ಟಿಯ ಬಳಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸಬೇಕು ಇಲ್ಲದಿದ್ದರೆ ಬೀಚ್ ಮುಳುಗಡೆಯಾಗುತ್ತದೆ ಎಂದು ವಿನಂತಿಸಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್ ಮಾತನಾಡಿ ಬೀಚಿನಲ್ಲಿ ಹೊರಗಿನವರು ಬಂದು ಕಾರುಬಾರು ನಡೆಸುತ್ತಿದ್ದಾರೆ. ಸ್ಥಳೀಯರಿಗೆ ಪ್ರೋತ್ಸಾಹ ನೀಡುವಂತೆ ಸಮಿತಿ ರಚನೆಯಾಗಬೇಕು ಎಂದು ಸಚಿವರಲ್ಲಿ ವಿನಂತಿಸಿದರು. ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಸಚಿವರಿಗೆ ಮಳೆಗಾಲದಲ್ಲಿ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ
ಸ್ಥಳೀಯ ಕುಟುಂಬಗಳಿಗೆ ಸುರಕ್ಷತೆಯ ವ್ಯವಸ್ಥೆ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಶಾಸಕರು ಬೀಚ್ ಅಭಿವೃದ್ಧಿಯ ಬಗ್ಗೆ ಬಂದರು ಹಾಗೂ ಮೀನುಗಾರಿಕಾ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳದಲ್ಲಿ ಚರ್ಚಿಸಿದರು.

ಈ ಸಂದರ್ಭ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್,ಹಳೆಯಂಗಡಿ ಗ್ರಾ ಪಂ ಸದಸ್ಯರಾದ ಪದ್ಮಾವತಿ ಶೆಟ್ಟಿ, ಜಲಜ ಪಾಣಾರ್,ಅನಿಲ್ ಪೂಜಾರಿ, ಚಂದ್ರಕುಮಾರ್, ಧರ್ಮಾನಂದ ಶೆಟ್ಟಿಗಾರ್, ಯೂಸುಫ್, ತೇಜಾಕ್ಷಿ ಮೆಂಡನ್, ಕದಿಕೆ ಮೊಗವೀರ ಸಭಾದ ಅಧ್ಯಕ್ಷ ರೋಹಿತಾಕ್ಷ ಎಚ್.ಅಮೀನ್, ಮಹಿಳಾ ಸಭಾದ ಕೋಶಾಧಿಕಾರಿ ಪ್ರಮೀಳಾ ಚಂದ್ರಶೇಖರ್, ಪ್ರಕಾಶ್ ಕಿನ್ನಿಗೋಳಿ, ಸಚಿನ್ ಕುಕ್ಯಾನ್, ಸೀತಾರಾಮ್ ಸಾಲ್ಯಾನ್ ಲೈಟ್ ಹೌಸ್,ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ ಎನ್
ಮುಲ್ಕಿ ತಹಶಿಲ್ದಾರ್ ಪ್ರದೀಪ್, ಉಪ ತಹಶಿಲ್ದಾರ್ ದಿಲೀಪ್, ಹಳೆಯಂಗಡಿ ಪಂಚಾಯತ್ ವಿಎ ಸುರೇಶ್, ಕಾರ್ಯದರ್ಶಿ ಕೇಶವ ಮತ್ತಿತರರು ಉಪಸ್ಥಿತರಿದ್ದರು

