Share this news

ಉಡುಪಿ: ರಾಜ್ಯ ಸಹಕಾರ ಭಾರತಿ ಹಾಲು ಪ್ರಕೋಷ್ಟದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ, ಗೋವಿಗಾಗಿ ಮೇವು,ಗೋ ಸೇವಾ ಅಭಿಯಾನ ಮುಂತಾದ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ರಾಜ್ಯದ ಎಲ್ಲಾ ಹಾಲು ಉತ್ಪಾದಕರ ಸಂಘಗಳ ಆವರಣದಲ್ಲಿ “ಸಾಮೂಹಿಕ ಗೋಪೂಜೆ” , “ಗೋ ಸೇವಾ ಅಭಿಯಾನ” ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಮತ್ತು ಹಾಲು ಪ್ರಕೋಷ್ಟದ ಸಂಚಾಲಕರು ಸಹ ಸಂಚಾಲಕರು ಮತ್ತು ಸದಸ್ಯರು ಹತ್ತಿರದ ಗೋಶಾಲೆಗೆ ಭೇಟಿ ನೀಡಿ ” ಸಾಮೂಹಿಕ ಗೋಪೂಜೆ ಗೋಗ್ರಾಸ ಸೇವೆಯನ್ನು (ಗೋವುಗಳಿಗೆ ಹಸಿರು ಮೇವು,ಪಶು ಆಹಾರ) ಸಹಕಾರಿ ಸಂಸ್ಥೆಗಳ ದಾನ ಧರ್ಮದ ನಿಧಿಯಿಂದ ದೇಣಿಗೆ ನೀಡಬಹುದು
ಗೋ ಸೇವೆಯಲ್ಲಿ ನಿರತರಾಗಿರುವ ಸ್ಥಳೀಯ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗೋವಿಗಾಗಿ ಮೇವು ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು.
ರಸ್ತೆ ಬದಿಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದಿರುವ ಹಸಿರು ಹುಲ್ಲನ್ನು ಕತ್ತರಿಸಿ ಗೋಶಾಲೆಗಳಿಗೆ ನೀಡಬಹುದು
ಸಹಕಾರಿ ಸಪ್ತಾಹ ಆಚರಣೆಯ ಪ್ರಾರಂಭೋತ್ಸವದಂದು(ನವೆಂಬರ್ 14) ಸ್ಥಳೀಯವಾಗಿ ಗೋ ಸೇವೆಯಲ್ಲಿ ತೊಡಗಿಕೊಂಡಿರು ವವರು ಮತ್ತು ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ಮಾಡುತ್ತಿರುವ ರೈತರಿಗೆ ಅವರ ಮನೆಗೆ ಅಥವಾ ಕೃಷಿ ಹೈನುಗಾರಿಕಾ ಕ್ಷೇತ್ರಕ್ಕೆ ಹೋಗಿ ಸಹಕಾರಿ ಸಾಧಕಗೌರವ ಪುರಸ್ಕಾರ ನೀಡಬಹುದು
ಸಹಕಾರ ಭಾರತಿಯ ತಾಲೂಕು ಸಮಿತಿಗಳ ಮೂಲಕವೂ ಈ ಮೇಲಿನ ಎಲ್ಲಾ ಕಾರ್ಯಕ್ರಮಗಳನ್ನು ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಬೇಕು ಎಂದು ರಾಜ್ಯ ಹಾಲು ಪ್ರಕೋಷ್ಟ ಸಂಚಾಲಕ ಸಾಣೂರು ನರಸಿಂಹ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

 

 

 

 

 

 

Leave a Reply

Your email address will not be published. Required fields are marked *