ಕಾರ್ಕಳ:ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಖತರ್ನಾಕ್ ಕಳ್ಳರು ಕೈಚಳಕ ತೋರಿಸಿದ್ದು, ಮನೆಮಂದಿ ಪೇಟೆಗೆ ಹೋದ ಬೆನ್ನಲ್ಲೇ ಮನೆಯ ಛಾವಣಿಯ ಹೆಂಚು ತೆಗೆದು ಒಳನುಗ್ಗಿ ಕಪಾಟಿನಲ್ಲಿರಿಸಿದ್ದ 2 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.
ಮೊಹಮ್ಮದ್ ಪೈರೋಜ್ ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು,ಮಹಮ್ಮದ್ ತನ್ನ ಪತ್ನಿ ಶಾಹಿದಾ ಭಾನು ಹಾಗೂ ಮಗಳು ಸಾಬಿಯಾ ಭಾನು ಜತೆ ಸೋಮವಾರ ಸಂಜೆ 5 ಗಂಟೆಗೆ ಮನೆಯಿಂದ ಕಾರ್ಕಳದ ಪೇಟೆಗೆ ಹೋಗಿ 7.30 ರ ಸುಮಾರಿಗೆ ವಾಪಾಸು ಮನೆಗೆ ಬಂದಾಗ ಕಳ್ಳರು ಮನೆಯ ಹಂಚನ್ನು ತೆಗೆದು ಒಳ ಪ್ರವೇಶಿಸಿ ಗೋಡ್ರೆಜ್‌ನಲ್ಲಿ ಇಟ್ಟಿದ್ದ 2 ಲಕ್ಷ ರೂಪಾಯಿಯನ್ನು ಕಳವು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ