ಕಾರ್ಕಳ: ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಕೃಷಿ ಜಮೀನಿಗೆ ನಿರ್ಮಿಸಲಾಗಿದ್ದ ಆವರಣ ಗೋಡೆಯನ್ನು ಕೆಡವಿ ಕೃಷಿಗೆ ಬೆಂಕಿ ಹಚ್ಚಿ ನಾಶಗೊಳಿಸಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳದ ಬಂಗ್ಲೆಗುಡ್ಡೆ ನಿವಾಸಿ ಡಾ.ಬಿ ಮಂಜುನಾಥ ಎಂಬವರು ಸಾಣೂರು ಗ್ರಾಮದ ಸರ್ವೆ ನಂ 311/21 ರಲ್ಲಿ 0.26 ಎಕ್ರೆ ,ಸರ್ವೆ ನಂ 19/01 ರಲ್ಲಿ 0.58 ಎಕ್ರೆ ಮತ್ತು ಸರ್ವೆ ನಂ 19/8 ರಲ್ಲಿ 0.43 ಎಕ್ರೆ ಕೃಷಿ ಜಮೀನು ಖರೀದಿಸಿದ್ದರು. ತಮ್ಮ ಜಮೀನಿನ ಕೃಷಿಯ ರಕ್ಷಣೆಗಾಗಿ ಜಾಗದ ಸುತ್ತ ಮುರಕಲ್ಲಿನ ಆವರಣ ಗೋಡೆ ನಿರ್ಮಿಸಿದ್ದರು.ಈ ಗೋಡೆಯನ್ನು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ,ಪ್ರವೀಣ್ ವಸಂತ್ ಹಾಗೂ ಮತ್ತಿತರರು ಶುಕ್ರವಾರ ರಾತ್ರಿ ಏಕಾಎಕಿ ಒಡೆದುಹಾಕಿ ಬಳಿಕಕೃಷಿ ಜಮೀನಿಗೆ ಬೆಂಕಿಹಾಕಿ ಕೃಷಿಯನ್ನು ನಾಶಪಡಿಸಿದ್ದಾರೆ ಎಂದು ಡಾ. ಮಂಜುನಾಥ ದೂರು ನೀಡಿದ್ದಾರೆ
ಈ ಕುರಿತು ಆರೋಪಿಗಳ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ