Share this news

ಕಾರ್ಕಳ: ಉಡುಪಿ ಜಿಲ್ಲಾ ಪಂಚಾಯತ್, ಪಶು ಸಂಗೋಪನೆ ಹಾಗೂ ಪಶುವೈದ್ಯ ಸೇವಾ ಇಲಾಖೆ ಕಾರ್ಕಳ, ದ ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಹಾಗೂ ಉದಯರವಿ ಕಲಾವೃಂದ(ರಿ) ಮುದ್ದಣ್ಣನಗರ, ಸಾಣೂರು ಇವರ ಸಂಯುಕ್ತ ಆಶ್ರಯದಲ್ಲಿ ಸಾಣೂರು ಗ್ರಾಮಸ್ಥರಿಗೆ ಮಿಶ್ರ ತಳಿ ಕರು ಮತ್ತು ಹಸು ಪ್ರದರ್ಶನ ಸ್ಪರ್ಧೆ ನಾಳೆ (ಡಿ. 22 ಶುಕ್ರವಾರದಂದು) ಸಾಣೂರು ಗರಡಿ ಬಳಿಯ ಉದಯ ರವಿ ಕಲಾವೃಂದ ವಠಾರದಲ್ಲಿ ಏರ್ಪಡಿಸಲಾಗಿದೆ

ಮಿಶ್ರತಳಿ ಕರು ಹಾಗೂ ಹಸು ಪ್ರದರ್ಶನ ಹಾಗೂ ಸ್ಪರ್ಧೆಯನ್ನು
ಪಶುಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಡುಪಿ ಜಿಲ್ಲಾ ಉಪನಿರ್ದೇಶಕರಾದ ಡಾ. ರೆಡ್ಡಪ್ಪ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಕದಂದಲೆ, ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್, ಬೋಳ ಸದಾಶಿವ ಶೆಟ್ಟಿ, ಸ್ಮಿತಾ.ಆರ್ .ಶೆಟ್ಟಿ ,ಸೂಡ, ಮುಡಾರು ಸುಧಾಕರ್ ಶೆಟ್ಟಿ, ಭಾಗವಹಿಸಲಿದ್ದಾರೆ.

ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ

ಸಾಣೂರು ಗ್ರಾಮದ ಎಲ್ಲಾ ಹೈನುಗಾರರು ತಮ್ಮ ಕರು ಮತ್ತು ಹಸುಗಳ ಜತೆ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ ಎಫ್, ಜೆರ್ಸಿ , ದೇಶಿಯ ತಳಿ ಹಾಗೂ ಕರುಗಳ ವಿಭಾಗ ಸೇರಿದಂತೆ ಒಟ್ಟು 4 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಿ ಕರು ಮತ್ತು ಹಸುಗಳ ಮಾಲಕರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.
ಇದಲ್ಲದೇ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ದನಕರುಗಳ ಮಾಲಕರಿಗೆ ತಲಾ 5 ಕೆಜಿ ನಂದಿನಿ ಪಶು ಆಹಾರ ಮತ್ತು ಆಕರ್ಷಕ ಬಹುಮಾನವಾಗಿ ಸ್ಟೀಲ್ ಪಾತ್ರೆಯನ್ನು ನೀಡಲಾಗುವುದು. ಆದ್ದರಿಂದ ಗ್ರಾಮದ ಹೈನುಗಾರರು ಈ ಕಾರ್ಯಕ್ರಮದಲ್ಲಿ ತಮ್ಮ ಹಸು ಹಾಗೂ ಕರುಗಳೊಂದಿಗೆ ಪಾಲ್ಗೊಳ್ಳಬೇಕಾಗಿ ಸಾಣೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಹಾಗೂ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ( ನಿ).ಮಂಗಳೂರು ಇದರ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ರವರು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *