Share this news

ಹೆಬ್ರಿ: ಸಾಹಿತ್ಯಕ್ಷೇತ್ರದ ದಿಗ್ಗಜ,ಕಸಾಪ ಮಾಜಿ ಅಧ್ಯಕ್ಷ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ(87) ಮಂಗಳವಾರ ಮುಂಜಾನೆ ಮುದ್ರಾಡಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಈ ಮೂಲಕ ಕಳೆದ 7 ದಶಕಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸಾಹಿತ್ಯಕ್ಷೇತ್ರದ ಕೊಂಡಿ ಕಳಚಿದಂತಾಗಿದೆ.ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳವಾರ ಮುಂಜಾನೆ 7.20 ವೇಳೆಗೆ ಇಹಲೋಕ ತ್ಯಜಿಸಿದ್ದಾರೆ.
ಮುದ್ರಾಡಿಯ ಬಲ್ಲಾಡಿ ಸಮೀಪದ ಮೋನಪ್ಪಬೆಟ್ಟು ಎಂಬಲ್ಲಿ 1935ರ ಜೂನ್ 4ರಂದು ಬೂಬ ಶೆಟ್ಟಿಗಾರ್ ದಂಪತಿಯ ಅವರ ಸುಪುತ್ರರಾಗಿ ಜನಿಸಿದ ಅಂಬಾತನಯ ಮುದ್ರಾಡಿಯವರ ಮೂಲ ಹೆಸರು ಕೇಶವ ಶೆಟ್ಟಿಗಾರ್. ಬಾಲ್ಯದಿಂದಲೇ ಸಾಹಿತ್ಯಕ್ಷೇತ್ರದ ಕುರಿತು ಅಪಾರ ಆಸಕ್ತಿಹೊಂದಿದ್ದ ಕೇಶವ ಶೆಟ್ಟಿಗಾರ್ ಕಾಲೇಜು ಶಿಕ್ಷಣ ಮುಗಿಸಿ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರು. ಶಿಕ್ಷಕರಾಗಿದ್ದುಕೊಂಡೇ ಸಾಹಿತ್ಯಕೃಷಿ ಮುಂದುವರಿಸಿದ ಅವರ ಸಾಧನೆಗೆ ಅಂಬಾತನಯ ಎಂದು ನಾಮಾಂಕಿತರಾದರು.

ಕವಿ, ನಾಟಕಕಾರ, ವಚನಕಾರ, ಯಕ್ಷಗಾನ ಪ್ರಸಂಗಕರ್ತ, ಯಕ್ಷ ಗಾನ ಅರ್ಥಧಾರಿ, ಹರಿದಾಸ, ಜಿನದಾಸ, ವಿಡಂಬನಕಾರ, ವಾಗ್ಮಿ, ಚಿಂತನ ಅಂಕಣಕಾರ, ಶಿಕ್ಷಕರ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿ ಹೀಗೆ ಸಾಹಿತ್ಯದ ವಿವಿಧ ಮಗ್ಗುಲುಗಳಲ್ಲಿ ಕೃಷಿ ಮಾಡಿದವರು.ರಾಜ್ಯೋತ್ಸವ ಪ್ರಶಸ್ತಿ ಪ್ರಶಸ್ತಿಯೂ ಸೇರಿದ೦ತೆ ಸ೦ಘ-ಸ೦ಸ್ಥೆಗಳಿ೦ದ ಪ್ರಶಸ್ತಿಗಳು ಹಾಗೂ ಸನ್ಮಾನಗಳು ಲಭಿಸಿವೆ.

ಸಾವಿರಕ್ಕೂ ಮಿಕ್ಕಿ ಕೃತಿಗಳು ಹಾಗೂ ಕವನ ಸಂಕಲನಗಳನ್ನು ಬರೆದ ಅಂಬಾತನ‌ ಮುದ್ರಾಡಿಯವರು ಅಪಾರ  ಓದುಗ ಬಳಗ ಹಾಗೂ ಅಭಿಮಾನಿ ಬಳಗ ಹೊಂದಿದ್ದರು.
ಅAಬಾತನಯ ಮುದ್ರಾಡಿ ಪತ್ನಿ, ಮೂವರು ಗಂಡು ಹಾಗೂ 6 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ

Leave a Reply

Your email address will not be published. Required fields are marked *