ಬೆಂಗಳೂರು:ಮುಖ್ಯಮAತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಸಿದ್ಧರಾಮಯ್ಯ ಅವರು ಸಚಿವ ಸಂಪುಟಕ್ಕೆ ಮೊದಲ ಕಂತಿನಲ್ಲಿ 8 ಶಾಸಕರನ್ನು ಸಚಿವರನ್ನಾಗಿ ಸೇರ್ಪಡೆಗೊಳಿಸಿದ ಬೆನ್ನಲ್ಲೇ ಇದೀಗ ನೂತನ ಸಚಿವರಾಗಿ 24 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಪೂರ್ಣ ಪ್ರಮಾಣ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ.
ಶನಿವಾರ ರಾಜಭನವದಲ್ಲಿ ನಡೆದ ಸರಳ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಅಧಿಕಾರ ಹಾಗೂ ಗೌಪ್ಯತಾ ಪ್ರತಿಜ್ಞಾವಿಧಿ ಬೋಧಿಸಿದರು.
ಇಂದು ಸಚಿವರಾಗಿ ಪ್ರಮಾಣವಚನ ವಚನ ಸ್ವೀಕರಿಸಿದವರ ಪಟ್ಟಿ:
1) ಹೆಚ್ ಕೆ ಪಾಟೀಲ್
2) ಕೃಷ್ಣಭೈರೇಗೌಡ
3) ಎನ್ ಚೆಲುವರಾಯಸ್ವಾಮಿ
4) ಕೆ ವೆಂಕಟೇಶ್
5)ಡಾ.ಹೆಚ್ ಸಿ ಮಹದೇವಪ್ಪ
6)ಈಶ್ವರ್ ಖಂಡ್ರೆ
7)ಕೆ ಎನ್ ರಾಜಣ್ಣ
8)ದಿನೇಶ್ ಗುಂಡೂರಾವ್
9)ಶರಣಬಸಪ್ಪ ದರ್ಶನಾಪುರ್
10)ಶಿವಾನಂದ ಪಾಟೀಲ್
11)ತಿಮ್ಮಾಪುರ ರಾಮಪ್ಪ ಬಾಳಪ್ಪ
12)ಎಸ್ ಎಸ್ ಮಲ್ಲಿಕಾರ್ಜುನ್
13)ಶಿವರಾಜ ತಂಡರಗಿ
14)ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್
15)ಮಂಕಾಳ್ ವೈದ್ಯ
16)ಲಕ್ಷ್ಮೀ ಹೆಬ್ಬಾಳ್ಕರ್
17)ರಹೀಂ ಖಾನ್
18)ಡಿ.ಸುಧಾಕರ್
19)ಸಂತೋಷ್ ಎಸ್ ಲಾಡ್
20)ಎನ್ ಎಸ್ ಬೋಸರಾಜು
21)ಸುರೇಶ ಬಿಎಸ್
22)ಮಧು ಬಂಗಾರಪ್ಪ
23)ಡಾ.ಎA.ಸಿ ಸುಧಾಕರ್
24)ಬಿ.ನಾಗೇಂದ್ರ
ಕಾAಗ್ರೆಸ್ ಹೈಕಮಾಂಡ್ ಕೊನೆಗೂ ಅಳೆದುತೂಗಿ ಜಾತಿ,ಪ್ರಾಂತ್ಯ,ಅನುಭವ ಹಾಗೂ ಹಿರಿತನದ ಆಧಾರದಲ್ಲಿ 24 ಮಂದಿಗೆ ಮಂತ್ರಿಭಾಗ್ಯ ಕರುಣಿಸಿದೆ. ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ ಸಚಿವರಿಗೆ ಖಾತೆ ಹಂಚಿಕೆಯೇ ಸಿದ್ದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.ಹೈಕಮಾಂಡ್ ಮಟ್ಟದಲ್ಲಿ ಮಂತ್ರಿಗಿರಿಗೆ ಲಾಬಿ ಮಾಡಿ ನಡೆಸಿ ಸ್ಥಾನ ಗಿಟ್ಟಿಸಿದ ಕೆಲ ಪ್ರಭಾವೀ ಸಚಿವರು ಇದೀಗ ಪ್ರಬಲ ಖಾತೆಗಳಿಗೂ ಪಟ್ಟು ಹಿಡಿದಿದ್ದು, ಸಿದ್ದರಾಮಯ್ಯ ಸರ್ಕಾರಕ್ಕೆ ಖಾತೆ ಹಂಚಿಕೆ ಸವಾಲಾಗಿ ಪರಿಣಮಿಸಿದೆ