Share this news

ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಜಾದ್ವನಿ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಮಾಜಿ ಸಚಿವ ಜಮೀರ್ ಅಹ್ಮದ್ ಸಿದ್ದರಾಮಯ್ಯ ಅವರ ಸರ್ಕಾರದ ಭಾಗ್ಯಗಳನ್ನು ಸ್ಮರಿಸುವ ಸಮಯದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

ಕ್ಷೀರಭಾಗ್ಯ ಎನ್ನುವ ಬದಲು ಶೀಲಭಾಗ್ಯ ನೀಡಿದ ಸಿದ್ದರಾಮಯ್ಯ ಎಂದು ಜಮೀರ್ ಹೇಳಿದ್ದು ಅವರ ಹೇಳಿಕೆ ಕೇಳಿ ವೇದಿಕೆಯಲ್ಲಿದ್ದವರು ಹಾಗೂ ಕಾರ್ಯಕರ್ತರು ಕ್ಷಣ ಕಾಲ ಕಕ್ಕಾಬಿಕ್ಕಿಯಾಗಿದ್ದಾರೆ.

ಕಲಬುರಗಿಯ ಎನ್ ವಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀರ್ ಅಹ್ಮದ್, ಬಿಜೆಪಿ ಯವರು ಯಾವತ್ತೂ ಅಭಿವೃದ್ಧಿಯ ಬಗ್ಗೆ ಮಾತನಾಡಲ್ಲ. ನಾವು ಮಾಡಿದ ಕೆಲಸದ ಮೇಲೆ ಮತ ಕೇಳುತ್ತೇವೆ. ಪ್ರಧಾನಿ ಮೋದಿ ಅವರು ಅಚ್ಚೆ ದಿನ್ ಆಯೆಂಗೆ ಎನ್ನುತ್ತಾರೆ ಆದರೆ ಇಲ್ಲಿಯವರೆಗೆ ಅದು ಯಾವುದೂ ಬಂದಿಲ್ಲ. ಬೆಲೆ ಏರಿಕೆ ಬಿಸಿಯಿಂದ ಜನ ತತ್ತರಿಸಿ ಹೋಗಿದ್ದಾರೆ .ನಮಗೆ ನಿಮ್ಮ ಅಚ್ಚೆದಿನ್ ಬೇಡ ಸ್ವಾಮಿ ನಮಗೆ ಮೊದಲಿನ ಅಚ್ಚೆ ದಿನಗಳೇ ಸಾಕು ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರು ಮಾತನಾಡಿ, ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಆರಂಭ ಮಾಡಿದ್ದೇವೆ. ಶರಣರ ನಾಡು ಬಸವ ಕಲ್ಯಾಣದಿಂದ ಆರಂಭ ಮಾಡಿದ್ದೇವೆ. ಬಸವಾದಿ ಶರಣರು ನುಡಿದಂತೆ ನಡೆದವರು .ಅದರಂತೆ ಕಾಂಗ್ರೆಸ್ ಪಕ್ಷ ಕೂಡ ನುಡಿದಂತೆ ನಡೆದ ಪಕ್ಷ. ನಮಗೆ ಈ ಹಿಂದೆ ಅವಕಾಶ ಕೊಟ್ಟಿದ್ದರು ಹಾಗಾಗಿ ಐದು ವರ್ಷ ಅವಕಾಶ ಸಿಕ್ಕಿದ್ದು ದೇವರಾಜ್ ಅರಸರ ನಂತರ ನನಗೆ ಅವಕಾಶ ಸಿಕ್ಕಿತ್ತು ಅವಕಾಶ ಕೊಟ್ಟಾಗ ಎಲ್ಲಾ ಭರವಸೆಯನ್ನು ಈಡೇರಿಸಿದ್ದೇವೆ ಕೊಟ್ಟ ಭರವಸೆ ಈಡೇರಿಸದಿದ್ದರೆ ಜನರಿಗೆ ದ್ರೋಹ ಮಾಡಿದಂತೆ ಎಂದರು

Leave a Reply

Your email address will not be published. Required fields are marked *