ಕಾರ್ಕಳ :ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನು ತನ್ನ ಯೋಗ್ಯತೆ ಮೀರಿ ಠೀಕಿಸುವ ಸಂಸದ ಪ್ರತಾಪ್ಸಿಂಹಗೆ ಅಹಂಕಾರ ಅಮಲು ತಲೆಗೇರಿದೆ.ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಅವರ ಹೇಳಿಕೆ ಅಹಂಕಾರದ ಪರಮಾವಧಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಕಿಡಿಕಾರಿದ್ದಾರೆ.
ಇತ್ತೀಚೆಗೆ ಪ್ರತಾತ್ ಸಿಂಹ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮನುವಾದಿ ಮಾನವೀಯ ಮತ್ತು ರಾಜಕೀಯ ಸಂಸ್ಕೃತಿಯ ಪ್ರತೀಕ. ಪ್ರಧಾನಿ ಮೋದಿಯನ್ನು ಮೆಚ್ಚಿಸುವ ಭರದಲ್ಲಿ ಪ್ರತಾಪಸಿಂಹ ಸಿದ್ಧರಾಮಯ್ಯನವರ ಮೇಲೆ ಮಾಡಿದ ಟೀಕೆ ಸಮಗ್ರ ಮಾಂಸಾಹಾರಿ ಜನಾಂಗವನ್ನೆ ನಿಂದಿಸಿದAತಾಗಿದೆ. ಇದೊಂದು ಜನಾಂಗೀಯ ನಿಂದನೆಯ ಉದ್ಧಟತನದ ತಿಳಿಗೇಡಿ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 6 ತಿಂಗಳಲ್ಲಿ ಸಂಸದ ಪ್ರತಾಪ್ಸಿಂಹ ಕ್ಷೇತ್ರದಲ್ಲಿ 6 ಅಮೂಲ್ಯ ಬಡಜೀವಗಳು ಅದೆಷ್ಟೋ ಜಾನುವಾರುಗಳು ಹುಲಿಗಳಿಗೆ ಆಹಾರವಾಗಿವೆ. ಯಾವೊಬ್ಬ ಸಂತ್ರಸ್ತನಿಗೂ ಈ ವರೆಗೆ ಪರಿಹಾರ ಸಿಕ್ಕಿಲ್ಲ.
ಬಹುಶ ಒಬ್ಬ ಜನಪ್ರತಿನಿಧಿಯಾಗಿದ್ದುಕೊಂಡು ಸಂಸದ ಪ್ರತಾಪಸಿಂಹ ಪ್ರಧಾನಿ ಮೋದೀಜಿಯವರನ್ನು ಸಫಾರಿಯಿಂದ ಸಂತ್ರಸ್ತರ ಮನೆಗೆ ಬೇಟಿ ಮಾಡಿಸಿ ಸಾಂತ್ವನ ಹೇಳಿಸಿ ಪರಿಹಾರ ಕೊಡಿಸುವ ಕೆಲಸ ಮಾಡಬೇಕಿತ್ತು. ಇದು ಒಬ್ಬ ಜನಪ್ರತಿನಿಧಿಯಾದವನ ಕರ್ತವ್ಯವೂ ಹೌದು. ಆದರೆ ಹೆಲಿಕಾಪ್ಟರ್ ಸದ್ದಿಗೆ ಕಾಡಿನಲ್ಲಿ ಹುಲಿಗಳು ಹೆದರಿ ಗುಹೆ ಸೇರುತ್ತವೆ ಎಂದು ಗೊತ್ತಿದ್ದೂ ಪ್ರಧಾನಿಯವರಿಗೆ ಹುಲಿ ನೋಡಲು ಹೆಲಿಕಾಪ್ಟರ್ ಆಯೋಜಿಸಿ ಹುಲಿಗಳು ನೋಡಲು ಸಿಗದಂತೆ ಮಾಡಿದ ವಿಘ್ನ ಸಂತೋಷಿಗಳಿಗೆ ಇದು ಅರ್ಥವಾಗದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ವ್ಯಂಗ್ಯವಾಗಿದ್ದಾರೆ.