Share this news

ಬೆಂಗಳೂರು: ಚಂದ್ರಯಾನದ 3ರ ಯಶಸ್ಸಿನ ಬೆನ್ನಲ್ಲೇ ಸೂರ್ಯಯಾನಕ್ಕೆ ಸಜ್ಜಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರವು (ಇಸ್ರೊ), ಉಡ್ಡಯನದ ಪೂರ್ವಾಭ್ಯಾಸವನ್ನು ಬುಧವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಶ್ರೀಹರಿಕೋಟದ ಉಡ್ಡಯನ ನೆಲೆಯಿಂದ ಸೆ.2ರಂದು ಬೆಳಗ್ಗೆ 11.50ಕ್ಕೆ ನೌಕೆಯ ಉಡ್ಡಯನ ನಡೆಯಲಿದ್ದು, ಈ ಸಂಬAಧ ನೌಕೆಯ ಉಡ್ಡಯನ ಪ್ರಕ್ರಿಯೆ ಮತ್ತು ರಾಕೆಟ್‌ನ ಆಂತರಿಕ ತಪಾಸನಾ ಪರೀಕ್ಷೆಗಳನ್ನು ಬುಧವಾರ ನಡೆಸಲಾಯಿತು ಎಂದು ಇಸ್ರೋ ಮಾಹಿತಿ ನೀಡಿದೆ.

ಚಂದ್ರನ ಕಡೆಗೆ ಈಗಾಗಲೇ ಮೂರು ಉಡ್ಡಯನ ಕೈಗೊಂಡಿರುವ ಇಸ್ರೋ ಇದೇ ಮೊದಲ ಬಾರಿಗೆ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್-1 ಎಂಬ ನೌಕೆಯೊಂದನ್ನು ರವಾನಿಸುತ್ತಿದೆ. ನೌಕೆಯನ್ನು ಪಿಎಸ್‌ಎಲ್‌ವಿ-ಸಿ 57 ರಾಕೆಟ್ ಮೂಲಕ ಉಡ್ಡಯನ ಮಾಡಲಾಗುತ್ತಿದ್ದು, ಅದನ್ನು ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಎಲ್1 ಎಂದು ಕರೆಯಲಾಗುವ ಸ್ಥಳದಲ್ಲಿ ನಿಯೋಜಿಸಲಾಗುತ್ತದೆ. ಎಲ್1 ಸ್ಥಳಕ್ಕೆ ತಲುಪಲು ಅದಕ್ಕೆ 4 ತಿಂಗಳು ಹಿಡಿಯಲಿದೆ. ಅದು ಅಲ್ಲಿಂದಲೇ ಸೂರ್ಯನ ಕುರಿತು ಸಂಶೋಧನೆ ನಡೆಸಿ ಭೂಮಿಗೆ ಮಾಹಿತಿ ರವಾನಿಸಲಿದೆ

Leave a Reply

Your email address will not be published. Required fields are marked *