ಬೆಂಗಳೂರು: ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್‌ಅನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿAಗ್ ಮಾಡುವ ಮೂಲಕ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇದೀಗ ತನ್ನ ಮುಂದಿನ ಮಿಷನ್‌ನ ಯೋಜನೆಯನ್ನು ಪ್ರಕಟಿಸಿದೆ.
ಈಗಾಗಲೇ ಪ್ರಕಟವಾಗಿರುವಂತೆ ಸೂರ್ಯನನ್ನು ಅವಲೋಕನ ಮಾಡುವ ನಿಟ್ಟಿನಲ್ಲಿ ಬ್ಯಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವಾದ ಆದಿತ್ಯ ಎಲ್-1 ನೌಕೆಯನ್ನು ಇಸ್ರೋ ಕಳಿಸಿಕೊಡಲಿದೆ ಎಂದು ವರದಿಯಾಗಿತ್ತು. ಈಗ ಈ ಯೋಜನೆಯ ಉಡಾವಣೆಯ ದಿನಾಂಕ ಹಾಗೂ ಸಮಯವನ್ನು ಇಸ್ರೋ ಪ್ರಕಟಿಸಿದೆ. ಮುಂದಿನ ಶನಿವಾರ ಅಂದರೆ, ಸೆಪ್ಟೆಂಬರ್ 2 ಎಂದು ಆದಿತ್ಯ ಎಲ್-1 ನೌಕೆಯನ್ನು ಉಡಾವಣೆ ಮಾಡಲಿದ್ದೇವೆ ಎಂದು ಇಸ್ರೋ ತಿಳಿಸಿದೆ. ಬೆಳಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿAದ ಇದರ ಉಡಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.
ಸಾರ್ವಜನಿಕರು ಕೂಡ ಈ ಉಡಾವಣೆಯನ್ನು ನೇರವಾಗಿ ವೀಕ್ಷಣೆ ಮಾಡಬಹುದು. ಆದರೆ ಅದಕ್ಕಾಗಿ ನೋಂದಣಿ ಮಾಡಿಕೊಳ್ಳಬೇಕು. ಶಾರ್ ಎಂದು ಕರೆಯಲ್ಪಡುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿAದ ಬೆಳಗ್ಗೆ 11.50ಕ್ಕೆ ಆದಿತ್ಯ ಎಲ್ -1 ಉಡಾವಣೆಯಾಗಲಿದೆ. ಇದನ್ನು ಲಾಚ್ ವೀವ್ ಗ್ಯಾಲರಿಯಿಂದ ನೋಡಬೇಕಾದಲ್ಲಿ ಆ.29ರಿಂದ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಇಸ್ರೋ ಆದಿತ್ಯ ಎಲ್-1 ಅನ್ನು ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರದ ಲಾಂಗ್ರೇಜ್ ಪಾಯಿಂಟ್‌ಗೆ ತಲುಪಿಸುತ್ತದೆ. ಚಂದ್ರನಿAದ ನಾಲ್ಕು ಪಟ್ಟು ದೂರದ ಅಂತರ ಇದಾಗಿದೆ. ಆರಂಭದಲ್ಲಿ ಈ ನೌಕೆಯನ್ನು ಭೂಮಿಯ ಕೆಳಕಕ್ಷೆಯಲ್ಲಿ ಮೊದಲ ಸ್ಥಾಪನೆ ಮಾಡಲಾಗುತ್ತದೆ. ಬಳಿಕ ನೌಕೆಯಲ್ಲಿರುವ ಪ್ರಪಲ್ಶನ್ ಮಾಡ್ಯುಲ್‌ಅನ್ನು ಬಳಸಿಕೊಂಡು ದೀರ್ಘ ಕಕ್ಷೆಯ ಮೂಲಕ ಇದನ್ನು ಲಾಂಗ್ರೇಜ್-1 ಪಾಯಿಂಟ್‌ಗೆ ತಲುಪಿಸುವುದು ಇಸ್ರೋದ ಗುರಿಯಾಗಿದೆ. ಈ ಎಲ್-1 ಪಾಯಿಂಟ್ ಎನ್ನುವ ಪ್ರದೇಶದಲ್ಲಿ ಭೂಮಿ ಕಕ್ಷೆಗಳ ಗುರುತ್ವಾಕರ್ಷಣೆ ಬಲ ಇರುವುದಿಲ್ಲ. ಭೂಕಕ್ಷೆಯನ್ನು ದಾಟಿದ ಬಳಿಕ ಇದನ್ನು ಎಲ್-1ನ ಹೊರಗಿರುವ ದೊಡ್ಡ ಹಾಲೋ ಆರ್ಬಿಟ್‌ಗೆ ನೌಕೆಯನ್ನು ಸೇರಿಸಲಾಗುತ್ತದೆ. ಉಡಾವಣೆಯಿಂದ ಎಲ್-1ವರೆಗಿನ ಆದಿತ್ಯ-ಎಲ್1 ಯೋಜನೆಯ ಅವಧಿ ಭರ್ತಿ ನಾಲ್ಕು ತಿಂಗಳು. ಆದಿತ್ಯ ನೌಕೆ ಎಲ್-1ಗೆ ಹೇಗೆ ಸೇರುತ್ತದೆ ಎನ್ನುವ ಮಾಹಿತಿಯನ್ನೂ ಇಸ್ರೋ ಹಂಚಿಕೊAಡಿದೆ.