ಕಾರ್ಕಳ : ಗ್ವಾಲಿಯರ್, ಮಧ್ಯ ಪ್ರದೇಶದಿಂದ 71 ವರ್ಷದ ಅಶೋಕ್ ಶರ್ಮಾ ಜಿ ಎಂಬವರು ತಮ್ಮ ಸೈಕಲ್‌ನಲ್ಲಿ ಅಖಿಲ ಭಾರತ ತೀರ್ಥಯಾತ್ರೆ ಕೈಗೊಂಡಿದ್ದು, ಅವರು ಇಂದು ಉಡುಪಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಕಾರ್ಕಳದಲ್ಲಿ ಸೈಕಲ್ ಉತ್ಸಾಹಿ ನ್ಯಾಯವಾದಿ ಎಂ.ಕೆ.ವಿಪುಲ್ ಅವರು ಅಶೋಕ್ ಶರ್ಮಾ ಅವರನ್ನು ಅವರನ್ನು ಸ್ವಾಗತಿಸಿ ಶುಭ ಹಾರೈಸಿದರು.
ಅಶೋಕ್ ಶರ್ಮಾ ಜಿ ಅವರು ಭಾರತದ ಭೌಗೋಳಿಕ ವ್ಯಾಪ್ತಿಯಲ್ಲಿ ಇರುವ ಪವಿತ್ರ ತೀರ್ಥ ಕೇಂದ್ರಗಳಿಗೆ ಭೇಟಿ ನೀಡುವ ಉದ್ದೇಶದಿಂದ ಈ ಪ್ರಯಾಣವನ್ನು ಹಮ್ಮಿಕೊಂಡಿದ್ದಾರೆ.
2 ವರ್ಷಗಳ ಹಿಂದೆ ಅವರು ತಮ್ಮ ಹುಟ್ಟೂರಾದ ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಸಂಚರಿಸಿ ಪ್ರಸ್ತುತ ಕರ್ನಾಟಕದಲ್ಲಿದ್ದಾರೆ, ಇಲ್ಲಿಂದ ಕೆರಳಕ್ಕಾಗಿ ಭಾರತದ ದಕ್ಷಿಣ ತುದಿಯಲ್ಲಿರುವ ಪವಿತ್ರ ಕ್ಷೇತ್ರವಾದ ರಾಮೇಶ್ವರಂಗೆ ಹೋಗಿ ಮರಳಿ ಆಂಧ್ರ ತೆಲಂಗಾಣ ಒರಿಸ್ಸಾ ಛತ್ತೀಸ್ಗಡ್ ಜಾರ್ಖಂಡ್ ಆಗಿ ತಮ್ಮ ಹುಟ್ಟೂರಿಗೆ ವಾಪಸ್ ಹೋಗುವ ಗುರಿಯನ್ನು ಇಟ್ಟುಕೊಂಡಿದ್ದಾರೆ.
ಅಯೋಧ್ಯೆ, ಕಾಶಿ, ಕೇದಾರನಾಥ, ಬದರಿನಾಥ, ವೈಷ್ಣವ ದೇವಿ, ಅಮೃತಸರ, ದ್ವಾರಕಾ ಇವರು ಭೇಟಿ ನೀಡಿದ ಹಲವು ಸ್ಥಳಗಳಲ್ಲಿ ಒಂದಾಗಿವೆ.