ಬೆಂಗಳೂರು: ಸೈಬರ್ ಭದ್ರತೆ, ಸೈಬರ್ ಅಪರಾಧ ತಡೆ ಹಾಗೂ ದತ್ತಾಂಶ ಖಾಸಗಿತನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಕ್ಕೆ ಪ್ರತ್ಯೇಕ ಸೈಬರ್ ನೀತಿ 2023 ರಚನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರ ನಿಯಂತ್ರಣ ಅಗತ್ಯವಿದೆ. ಹೀಗಾಗಿ ರಾಜ್ಯಕ್ಕೆ ಪ್ರತ್ಯೇಕ ಸೈಬರ್ ನೀತಿ ರಚಿಸಲಾಗುವುದು. ಈ ನೀತಿಯಿಂದಾಗಿ ಸೈಬರ್ ಅಪರಾಧ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಸೈಬರ್ ಭದ್ರತೆ, ದತ್ತಾಂಶ ಖಾಸಗಿತನದ ಕುರಿತಂತೆ ಜಾಗೃತಿ ಮೂಡಿಸಲಾಗುತ್ತದೆ. ಗ್ರಾಮ ಮಟ್ಟದಲ್ಲೂ ಸ್ವಯಂ ಸೇವಕರ ಮೂಲಕ ಜಾಗೃತಿ ಮೂಡಿಸಲಾಗುವುದು. ಜತೆಗೆ ನೂತನ ನೀತಿ ಅಡಿಯಲ್ಲಿ ಸೈಬರ್ ಭದ್ರತೆ ಹಾಗೂ ಅಪರಾಧ ತಡೆಗೆ ಹೊಸ ತಂತ್ರಾAಶ ರೂಪಿಸಲಾಗುವುದು. ಅದರ ಮೂಲಕ ಸೈಬರ್ ಅಪರಾಧ ಪತ್ತೆ, ಅದರ ತಡೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ಇನ್ನು ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ವೆಹಿಕಲ್ ಟ್ರ‍್ಯಾಕಿಂಗ್ ವ್ಯವಸ್ಥೆ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಹಾಗೂ ಕೇಂದ್ರೀಕೃತ ಕಂಟ್ರೋಲ್ ರೂಂ ಸ್ಥಾಪನೆಗಾಗಿ 30.74 ಕೋಟಿ ರು. ವೆಚ್ಚದ ಅಂದಾಜು ಮೊತ್ತಕ್ಕೆ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ವೆಹಿಕಲ್ ಟ್ರ‍್ಯಾಕಿಂಗ್ ವ್ಯವಸ್ಥೆಯಿಂದಾಗಿ ಅಧಿಕಾರಿಗಳಿಗೆ ಬಸ್‌ಗಳ ಸಂಚಾರದ ಕುರಿತು ನೈಜ ಮಾಹಿತಿ ಸಿಗಲಿದೆ. ಬಸ್ ಎಲ್ಲಿದೆ, ಅದರಲ್ಲಿ ಎಷ್ಟುಪ್ರಯಾಣಿಕರಿದ್ದಾರೆ ಎಂಬAತಹ ಮಾಹಿತಿಗಳು ದೊರೆಯಲಿದೆ. ಅದರ ಜತೆಗೆ ಪ್ಯಾನಿಕ್ ಬಟನ್ ಅಳವಡಿಕೆಯಿಂದ ಸುಧಾರಿತ ಪ್ರಯಾಣ ಹಾಗೂ ಅಪಘಾತ, ಅವಘಡದಂತಹ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಸೇರಿದಂತೆ ಮತ್ತಿತರ ಸೂಕ್ತ ಕಡೆಗಳಿಂದ ನೆರವು ಪಡೆಯಬಹುದಾಗಿದೆ.