Share this news

ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವ ಮಾತಾಡಿದರೆ ಬಿಜೆಪಿ ನಾಯಕರಿಗೆ ಯಾಕೆ ಗಾಬರಿ? ಬಜರಂಗ ದಳ ಮತ್ತು ಹನುಮನ ನಡುವೆ ಎಲ್ಲಿಯ ಸಂಬಂಧ? ಅದೊಂದು ಸಂಘಟನೆಯಾದರೆ ಹನುಮ ರಾಮನ ಪರಮ ಭಕ್ತ ಮತ್ತು ನಾವೆಲ್ಲ ಆರಾಧಿಸುವ ದೇವರು. ಭಜರಂಗದಳ ರಾಜಕೀಯ ಸಂಘಟನೆ, ಬಿಜೆಪಿ ದೇವರ ಹೆಸರಿನಲ್ಲಿ ಸಮಾಜದ ದಾರಿತಪ್ಪಿಸುತ್ತಿದೆ  ಎಂದು ಕಾಂಗ್ರೆಸ್  ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್  ಹೇಳಿದ್ದಾರೆ

ಅವರು, ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಾನೂನುಬಾಹಿರ ಕೆಲಸಗಳಲ್ಲಿ ತೊಡಗುವ ಸಂಘಟನೆಗಳನ್ನು ಬ್ಯಾನ್ ಮಾಡುವ ಸಂಕಲ್ಪ ಕಾಂಗ್ರೆಸ್ ಪಕ್ಷ ಮಾಡಿಕೊಂಡಿದೆ . ಬಿಜೆಪಿ ನಾಯಕರು ವಿನಾಕಾರಣ ಬಜರಂಗ ದಳದ ಹೆಸರಲ್ಲಿ ಜನರನ್ನು ಪ್ರಚೋದಿಸುತ್ತಿದ್ದಾರೆ. ಅವರಿಗೆ ರಾಜ್ಯದ ಮೂಲ ಸಮಸ್ಯೆಗಳ ಬಗ್ಗೆ ಮಾತಾಡುವುದು ಬೇಕಿಲ್ಲ, ಇಲ್ಲಸಲ್ಲದ ವಿಚಾರಗಳನ್ನು ಸೃಷ್ಟಿಸಿಕೊಂಡು ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು  ಹೇಳಿದರು.

Leave a Reply

Your email address will not be published. Required fields are marked *