Share this news

ಉಡುಪಿ: ಹಾಡುಗಳು ಮಧುರ, ಲಯ, ಸಾಹಿತ್ಯ, ಜೊತೆಗೆ ಸಂಗೀತ ವಾದ್ಯಗಳನ್ನು ಹೊಂದಿರುವ ಸಂಗೀತದ ಸಂಯೋಜನೆಯಾಗಿದೆ. ಅಬಾಲವೃದ್ದರಾಗಿ ಸಂಗೀತವನ್ನು ಕೇಳುತ್ತಾರೆ ಎಂದು ಶಿಕ್ಷಕ  ವಿದ್ವಾನ್ ಯಶವಂತ ಎಂ.ಜಿ ಹೇಳಿದರು.

ಅವರು ಭಾನುವಾರ ಮಣಿಪಾಲದ ಪರ್ಣಕುಟೀರ ಸಭಾಂಗಣದಲ್ಲಿ ನಡೆದ ಸ್ವರಾಮೃತ ತಂಡದ ಲೋಗೋ ಬಿಡುಗಡೆ ಗೊಳಿಸಿ ಮಾತನಾಡಿದರು. ಹಾಡುಗಳನ್ನು ಸಂಗೀತ ಕೃತಿಗಳೆಂದು ಪರಿಗಣಿಸಲಾಗುತ್ತದೆ . ಸ್ಫೂರ್ತಿ,ಸಂವೇದನೆ ಮೂಲಕ ಮನಸ್ಸಿಗೆ ಆಪ್ತವಾಗುತ್ತವೆ ಎಂದರು.

ಕೆ.ಎAಸಿ ಅಸ್ಪತ್ರೆಯ ಇಲೆಕ್ಟ್ರಿಕಲ್ ಇಂಜಿನಿಯರ್ ರವೀAದ್ರ ಮಾತನಾಡಿ, ಸಾಹಿತ್ಯಕ್ಕೆ ರಾಗವನ್ನು ಕೊಟ್ಟು ಹಾಡುಗಳನ್ನು ಹಾಡುತ್ತಾ ಮನಸ್ಸನ್ನು  ಮುದಗೊಳಿಸಲು ಸಾಧ್ಯ ಎಂದರು.  ಗಾಯಕಿ ರಶ್ಮಿ  ಅರ್ ಪ್ರಭು ಮಾತನಾಡಿ, ಸ್ವರಕ್ಕೆ ಅಮೃತವನ್ನು ನೀಡುವ ಸ್ವರಾಮೃತ ಪರಿಕಲ್ಪನೆ ಅದ್ಭುತವಾಗಿದೆ. ಹಾಡುಗಾರರಿಗೆ ಈ ತಂಡ ಆಶ್ರಯ ನೀಡಲಿದೆ ಎಂದರು .
ಖ್ಯಾತ ಗಾಯಕಿ ವೈಷ್ಣವಿ ರವೀಂದ್ರ ಮಾತನಾಡಿ, ಹಾಡುಗಾರಿಕೆ ಕೇವಲ ಮನರಂಜನೆ ಯಾಗಿಸದೆ ,ಸ್ಪರ್ಧಾತ್ಮಕವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಉದ್ಯಮಿ ರಾಧಾಕೃಷ್ಣ ಮಣಿಪಾಲ್ ಮಾತನಾಡಿದರು. ಶಾಶ್ವತ್ ತೆಳ್ಳಾರು, ಡಾ.ಗುರುಪ್ರಸಾದ್  ಶುಭಹಾರೈಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಹರಿಪ್ರಸಾದ್ ನಂದಳಿಕೆ, ರಾಂ ಅಜೆಕಾರು , ಚಿತ್ತಾರ ಸೇವಾ ರೂವಾರಿ ಸುಜಿತ್ ನಂದಳಿಕೆ,  ಮಲಬಾರ್ ಗೋಲ್ಡ್ ಮಾರ್ಕೆಟಿಂಗ್ ವ್ಯವಸ್ಥಾಪಕ ರಾಘವೇಂದ್ರ ನಾಯಕ್, ಲೇಖಕಿ ಸುಮ ಕಿರಣ್ , ಲೆಕ್ಕ ಪರಿಶೋಧಕ ಸುರೇಶ್, ಗೀತಾಂಜಲಿ , ಖ್ಯಾತ ಛಾಯಾಗ್ರಾಹಕ ಶರತ್ ಕಾನಂಗಿ, ಡಾ. ಸ್ನೇಹ ಗುರುಪ್ರಸಾದ್, ಉದ್ಯಮಿಗಳಾದ ಹರೀಶ್ ಶೆಟ್ಟಿ, ಶಶಿಕಾಂತ್ ಪ್ರಭು ,ಜಯಾನಂದ ಕುಲಾಲ್ ,ಪ್ರಸಾದ್‌ಅಚಾರ್ಯ, ರೂಪೇಶ್ , ಸುಭಾಸ್, ಕಿರಣ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *