ಹಾಸನ: ಹಾಸನ ಜಿಲ್ಲೆಯಲ್ಲಿರುವ ವಸತಿ ಶಾಲೆಯ ವಾಚ್ಮ್ಯಾನ್ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ಆರೋಪಿಸಿ ಪ್ರತಿಭಟನೆ ನಡೆಸಿದ್ದು, ಈ ಸಂಬAಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಹಲವು ವರ್ಷಗಳಿಂದ ಇಲ್ಲಿನ ಮಕ್ಕಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆದಿದೆ. ಈ ವಿಚಾರವನ್ನ ಪ್ರಾಂಶುಪಾಲರಿಗೆ ಮನವರಿಕೆ ಮಾಡಿದ್ದರೂ ಅವರು ಯಾವುದೇ ಕ್ರಮವಹಿಸಿಲ್ಲ. ಇದೀಗ ದೌರ್ಜನ್ಯ ಖಂಡಿಸಿ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪ್ರತಿಭಟನೆ ಆರಂಭಿದ್ದು, ಪ್ರಾಂಶುಪಾಲೆ ಗೀತಾ ಬಾಯಿ, ವಾಚ್ಮ್ಯಾನ್ ಪುನೀತ್, ಕನ್ನಡ ಶಿಕ್ಷಕ ಶಿವಯ್ಯ ಸಿಬ್ಬಂದಿ ಶೃತಿ ಹಾಗೂ ವಿಜಯರ್ ಕುಮಾರ್ ಎಂಬವರನ್ನು ಮಕ್ಕಳ ಮೇಲಿನ ದೌರ್ಜನ್ಯ ಕಾಯಿದೆ ಹಾಗೂ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡಿರುವ ಆರೋಪದಲ್ಲಿ ಬಂಧಿಸಲಾಗಿದೆ.
ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಯನ್ನ ಅಡ್ಡಗಟ್ಟಿದ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಸಮಸ್ಯೆ ಇದೆ ಎಂದು ಹೋರಾಟ ನಡೆಸಿದ್ದಾರೆ. ಈ ವೇಳೆ ಹಿರಿಯ ಅಧಿಕಾರಿಯೊಬ್ಬರು ಮಕ್ಕಳ ಬಳಿ ಗೌಪ್ಯ ಸಮಾಲೋಚನೆ ನಡೆಸಿದಾಗ ಇಲ್ಲಿ ನಡೆದಿರುವ ಕ್ರೌರ್ಯ ಬಯಲಾಗಿದೆ. ಸುಮಾರು ೮ ಮಕ್ಕಳು ಇಲ್ಲಿ ನಡೆಯುತ್ತಿರುವ ಅನಾಚಾರದ ಬಾಯಿ ಬಿಟ್ಟಿದ್ದು, ಈ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.