ನವದೆಹಲಿ: ಆನ್ಲೈನ್ ವಧು-ವರಾನ್ವೇಷಣೆ ವೇದಿಕೆಯಾಗಿರುವ ಭಾರತ್ ಮ್ಯಾಟ್ರಿಮೋನಿ ಹೋಳಿಹಬ್ಬದಂದು ಬಿಡುಗಡೆ ಮಾಡಿದ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ.
ಸಂಸ್ಥೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಮಹಿಳೆಯೊಬ್ಬಳು ಹೋಳಿ ಬಣ್ಣದಿಂದ ಆವರಿಸಿಕೊಂಡಿದ್ದ ತನ್ನ ಮುಖವನ್ನು ತೊಳೆದಾಗ ಮುಖದ ಮೇಲೆ ಗಾಯದ ಕಲೆಗಳು ಕಾಣಿಸುತ್ತವೆ. ಭಾರತದಲ್ಲಿ ಹಲವಾರು ಮಹಿಳೆಯರು ತಾವು ಅನುಭವಿಸುತ್ತಿರುವ ತೊಂದರೆಯಿಂದ ಹೋಳಿ ಆಡುವುದನ್ನು ಬಿಟ್ಟಿದ್ದಾರೆ. ಹಾಗಾಗಿ ಅವರನ್ನು ಪ್ರತಿದಿನ ರಕ್ಷಿಸಲು ಮುಂದಾಗಿ ಕೆಲವು ಬಣ್ಣಗಳು ಹೋಗುವುದಿಲ್ಲ ಎಂದಿಗೂ ಹೋಗುವುದಿಲ್ಲ ಎಂದು ಬರೆದಿತ್ತು.
ಇದರ ಬೆನ್ನಲ್ಲೇ ಹಲವಾರು ನೆಟ್ಟಿಗರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಇದು ಹಿಂದೂಗಳ ಆಚರಣೆಯನ್ನು ಹತ್ತಿಕ್ಕುವ ಪ್ರಯತ್ನ, ಕೆಲ ಅಜೆಂಡಾಗಳನ್ನು ಹೇರಲು ಹಿಂದೂ ಆಚರಣೆಯನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.