Share this news

ಕಾರ್ಕಳ: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೈಜ ಹಿಂದುತ್ವದ ರಕ್ಷಣೆಗಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿಕೊಂಡು ಯುವಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಸಂಘಟನೆಯ ಮಾಜಿ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಈ ಕುರಿತು ಬೆಳಗಾವಿ ವಿಭಾಗದ ಶ್ರೀರಾಮ ಸೇನೆಯ ಮಾಜಿ ಪದಾಧಿಕಾರಿಗಳು ಸೋಮವಾರ ಕಾರ್ಕಳ ಹೊಟೇಲ್ ಪ್ರಕಾಶ್ ನಲ್ಲಿ ಜಂಟೀ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಹೋರಾಟದಲ್ಲಿ ಮಡಿದ ಹಿಂದೂ ಕಾರ್ಯಕರ್ತರ ಕುಟುಂಬಗಳಿಗೆ ಪರಿಹಾರ ನೀಡುವ ನೆಪದಲ್ಲಿ ಸಂಘಟನೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣಸಂಗ್ರಹ ಮಾಡಿ ಅದನ್ನು ದುರ್ಬಳಕೆ ಮಾಡಿಕೊಂಡು,ಅದನ್ನು ಪ್ರಶ್ನೆ ಮಾಡಿದರೆ ಹಿಂದುತ್ವ ಹಾಗೂ ಸಿದ್ದಾಂತದ ಹೆಸರಿನಲ್ಲಿ ಬೆದರಿಸುವ ಮೂಲಕ ಸಂಘಟನೆಯನ್ನು ತನ್ನ ಸ್ವಾರ್ಥಕ್ಕಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಸಂಘಟನೆ ಹೆಸರಿನಲ್ಲಿ ಉದ್ಯಮಿಗಳಿಂದ ಹಫ್ತಾ ವಸೂಲಿ,ಪ್ರತಿಷ್ಠಿತರನ್ನು ಸುಲಿಗೆ ಮಾಡುವ ಟೈಗರ್ ಗ್ಯಾಂಗ್ ಎಂಬ ರಹಸ್ಯ ವಸೂಲಿ ವ್ಯವಸ್ಥೆ ನಡೆಯುತ್ತಿದೆ,ಅವರು ಕಾರ್ಕಳದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಲ್ಲಿ ಕರಾವಳಿ ಭಾಗದಲ್ಲಿ ಈ ಅಕ್ರಮಗಳು ತಾಂಡವವಾಡುವುದು ನಿಶ್ಚಿತ ಎಂದಿದ್ದಾರೆ.

ಹಿಂದುತ್ವ ಹೆಸರಿನಲ್ಲಿ ಅಮಾಯಕ ಯುವಕರಿಗೆ ಇಲ್ಲದ ಆಮಿಷಗಳನ್ನು ಒಡ್ಡಿ ಅವರ ವಿರುದ್ಧ ಕೇಸ್ ದಾಖಲಿಸಿದ ಪರಿಣಾಮ ಯುವಕರು ಮನೆ ಮಠ ಕಳೆದುಕೊಂಡು ಜೈಲು ವಾಸ ಅನುಭವಿಸುತ್ತಿದ್ದಾರೆ.ಅಂತಹವರ ಸಹಾಯಕ್ಕೆ ಬರದೇ ನಂಬಿಸಿ ಮುತಾಲಿಕ್ ಹಿಂದೂ ಕಾರ್ಯಕರ್ತರಿಗೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.

ಹಿಂದೂ ಸಂಘಟನೆ ಕಾರ್ಯಕರ್ತರು ಎಂದಿಗೂ ರಾಜಕೀಯಕ್ಕೆ ಬರುವಂತಿಲ್ಲ,ಸಂಘಟನೆಯಲ್ಲಿದ್ದುಕೊಂಡೇ ಹಿಂದುತ್ವ ರಕ್ಷಣೆಗಾಗಿ ಹೋರಾಟ ನಡೆಸಬೇಕು ಆದರೆ ಮುತಾಲಿಕ್ ಅವರು ವೈಯಕ್ತಿಕ ಲಾಭಕ್ಕಾಗಿ ಸಂಘಟನೆಯನ್ನು ಹಾಗೂ ಅಮಾಯಕ ಹಿಂದೂ ಯುವಕರನ್ನು ಬಳಸಿಕೊಂಡು ನಡುನೀರಿನಲ್ಲಿ ಕೈಬಿಟ್ಟಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದಾರೆ.

ಜಂಟೀ ಸುದ್ದಿಗೋಷ್ಟಿಯಲ್ಲಿ ಶ್ರೀರಾಮ ಸೇನೆ ಮಾಜಿ ರಾಜ್ಯ ಸಂಚಾಲಕ ರವಿ.ಸಿದ್ಲಿಂಗ್, ಮಾಜಿ ಉತ್ತರ ಪ್ರಾಂತ್ಯ ಪ್ರಮುಖ್ ಉಮೇಶ್ ಆಲ್ಮೇಲ್ಕರ್, ಶಿವಶಂಕರ್ ಖಾನಾಪುರ,ವಿಲಾಸ್ ರಾವ್ ಪವಾರ್ ಹಾಗೂ ಮಹೇಶ್ ಅರಾಕೇರಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *