ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ದೀಪಾವಳಿಯನ್ನು ಹಿಮಾಚಲ ಪ್ರದೇಶದಲ್ಲಿ ಗಡಿ ಕಾಯುತ್ತಿರುವ ಯೋಧರ ಜತೆ ಆಚರಿಸಿದರು. ಈ ಸಂದರ್ಭದಲ್ಲಿ ಯೋಧರಿಗೆ ಸಿಹಿ ತಿನ್ನಿಸಿ ಉಭಯ ಕುಶಲೋಪರಿ ವಿಚಾರಿಸಿ, ಸೈನಿಕರಿಗೆ ಧೈರ್ಯ ತುಂಬಿದರು
ಭಾನುವಾರ ಮುಂಜಾನೆ ಪ್ರಧಾನಿ ಮೋದಿಯವರು ಸೇನಾಪಡೆಯ ವಿಶೇಷ ವಿಮಾನದ ಮೂಲಕ ಹಿಮಾಚಲಪ್ರದೇಶದ ಲೆಪ್ಚಾಗೆ ಬಂದಿಳಿದು ಸೈನಿಕರೊಂದಿಗೆ ದೀಪಾವಳಿ ಆಚರಿಸುವುದಕ್ಕೆ ಆಗಮಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನಮ್ಮ ಧೈರ್ಯಶಾಲಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಲು ಹಿಮಾಚಲ ಪ್ರದೇಶದ ಲೆಪ್ಚಾ ತಲುಪಿದ್ದೇವೆ ಎಂದಿದ್ದಾರೆ. ಅತ್ಯಂತ ಕಠಿಣ ಹಾಗೂ ದುರ್ಗಮ ಪ್ರದೇಶದಲ್ಲಿ ಹಗಲುರಾತ್ರಿಯೆನ್ನದೇ ದೇಶದ ಗಡಿ ಕಾಯುವ ಯೋಧರ ಕುರಿತು ಶ್ಲಾಘಿಸಿಸಿದ ಪ್ರಧಾನಿ, ಯೋಧರ ಜತೆ ದೀಪಾವಳಿ ಆಚರಿಸುವ ಮೂಲಕ ಅವರಿಗೆ ನೈತಿಕ ಧೈರ್ಯ ತುಂಬುವ ಪ್ರಯತ್ನವಾಗಿದೆ ಎಂದಿದ್ದಾರೆ