ಕಾರ್ಕಳ : ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ಕಾರುಗಳೆರಡು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಎ.29ರಂದು ನಡೆದಿದೆ.
ಕಣಜಾರು ನಿವಾಸಿ ವಿವನ್ ಲ್ಯಾನ್ಸಿ ಮೆಂಡೋನ್ಸ ಎಂಬವರು ಎ.29ರಂದು ತಾಯಿ ಲೀನಾ ಮೆಂಡೋನ್ಸ ಹಾಗೂ ಪತ್ನಿ ವಿನೋಲಿನ್ ಮಿಸ್ಕಿತ್ ಎಂಬವರೊAದಿಗೆ ಕಾರ್ಯಕ್ರಮವೊಂದಕ್ಕೆ ಅಜೆಕಾರಿಗೆ ಹೋಗಿ ಹಿಂದಿರುಗುತ್ತಿದ್ದಾಗ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಕ್ರಾಸ್ ಬಳಿ ಕಾರ್ಕಳ ಕಡೆಯಿಂದ ಅಜೆಕಾರಿಗೆ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ವಿವನ್ ಲ್ಯಾನ್ಸಿ ಮೆಂಡೋನ್ಸ, ಲೀನಾ ಮೆಂಡೋನ್ಸ ಹಾಗೂ ವಿನೋಲಿನ್ ಮಿಸ್ಕಿತ್ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.