ಕಾರ್ಕಳ: ಮನೆಗೆ ನುಗ್ಗಿ ಕಪಾಟಿನಲ್ಲಿದ್ದ ಹಣ ಕಳ್ಳತನಗೈದ ಮಾಡಿದ ಘಟನೆ ಕಾರ್ಕಳ ತಾಲೂಕು ಹಿರ್ಗಾನದ ನೆಲ್ಲಿಕಟ್ಟೆ ಎಂಬಲ್ಲಿ ರವಿವಾರ ನಡೆದಿದೆ
ವಸಂತಿ ಶೆಡ್ತಿರವರು ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ವಾಸವಾಗಿದ್ದು ಜು.8ರಂದು ಮನೆಗೆ ಬೀಗ ಹಾಕಿ ಅಜೆಕಾರು ಮರ್ಣೆ ಗ್ರಾಮದಲ್ಲಿರುವ ತಮ್ಮನ ಮನೆಗೆ ಹೋಗಿದ್ದು,ಜು.9 ರಂದು ಸಂಜೆ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿದೆ.
ಕಳ್ಳರು ಮನೆಯ ಹಿಂದಿನ ಬಾಗಿಲಿನ ಬೀಗ ಒಡೆದು ಒಳಪ್ರವೇಶಿಸಿ,ಬೆಡ್ರೂಮಿಗೆ ಹಾಕಿದ ಬೀಗ ಒಡೆದು ಬೆಡ್ರೂಮಿನೊಳಗಿದ್ದ ಕಪಾಟಿನ ಬೀಗ ಒಡೆದು ಅದರೊಳಗೆ ಇದ್ದ ಕೀ ಸಹಾಯದಿಂದ ಲಾಕರನ್ನು ತೆರೆದು ಲಾಕರ್ ಒಳಗೆ ಇದ್ದ 1 ಲಕ್ಷ ರೂ ಹಣವನ್ನು ಕಳವು ಮಾಡಿದ್ದಾರೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ