ತುಮಕೂರು:ಹೆಂಡತಿ ಕಾಟಕ್ಕೆ ಮನನೊಂದು ನಮ್ಮಮೆಟ್ರೋ’
ಎಂಜಿನಿಯರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ಗುರುವಾರ ಈ ಘಟನೆ ನಡೆದಿದ್ದು,ಮಂಜುನಾಥ್(38) ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ನೀನು ಹಳ್ಳಿ ಗುಗ್ಗು’ ಎಂದು ಪದೇ ಪದೇ ಕಿಚಾಯಿಸ್ತಿದ್ದ ಹೆಂಡತಿ ಮಾತಿಗೆ ಕುಗ್ಗಿಹೋಗಿದ್ದ ‘ನಮ್ಮ ಮೆಟ್ರೋ ಎಂಜಿನಿಯರ್’ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ BMRCL ನಲ್ಲಿ ಇಂಜಿನಿಯರ್ ಆಗಿದ್ದ ಮಂಜುನಾಥ ಅವರಿಗೆ ಕೈ ತುಂಬಾ ಸಂಬಳ ಬರುತ್ತಿದ್ದರೂ ,ಪತ್ನಿ ಪ್ರಿಯಾಂಕ ಕಾಟಕ್ಕೆ ಮನನೊಂದು ಸಾವಿನ ಹಾದಿ ಹಿಡಿದಿದ್ದು ನಿಜಕ್ಕೂ ದುರಂತ .
ಮದುವೆ ಆದಾಗಿನಿಂದಲೂ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಪದೇ ಪದೇ ಹೆಂಡತಿ ಗಂಡನನ್ನು ಹೀಯಾಳಿಸುತ್ತಿದ್ದಳು ಎಂದು ಮಂಜುನಾಥ್ ಸಂಬಂಧಿಕರು ಆರೋಪಿಸಿದ್ದಾರೆ. ನೀನು ಹಳ್ಳಿ ಗುಗ್ಗು, ನಿನ್ನನ್ನು ಮದುವೆಯಾಗಲು ನನಗೆ ಇಷ್ಟವಿರಲಿಲ್ಲ ಎಂದು ಪತಿಯನ್ನು ಪತ್ನಿ ಹೀಯಾಳಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದು ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಆತ್ಮಹತ್ಯೆಗೂ ಮುನ್ನ ತನ್ನ ಸಹೋದರನಿಗೆ ಮಂಜುನಾಥ್ ಆಡಿಯೋ ಮೆಸೇಜ್ ಕಳುಹಿಸಿದ್ದಾರೆ. ನನಗೆ ಅವಳ ಜೊತೆ ಜೀವನ ಮಾಡೋಕೆ ಆಗುತ್ತಿಲ್ಲ, ಆ ಮನೆಹಾಳಿಯಿಂದ ನಾನು ಸಾಯುತ್ತಿದ್ದೇನೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮಂಜುನಾಥ್ ಆಡಿಯೋ ಮೇಸೆಜ್ ಮಾಡಿದ್ದಾರೆ
ಘಟನೆ ಕುರಿತು ಮಂಜುನಾಥ್ ಕುಟುಂಬಸ್ಥರು ಪ್ರಿಯಾಂಕ ವಿರುದ್ಧ ಆಕ್ರೋಶ ಹೊರಹಾಕಿದ್ದು, ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕ ವಿರುದ್ಧ ಎಫ್‌ಐಆರ್ ದಾಖಲಾಗಿದೆ.